ಪಾಂಡ್ಯ ಕೆಳ ಕ್ರಮಾಂಕದಲ್ಲೇ ಬರಲಿ: ಸೆಹವಾಗ್ ಸಲಹೆ
Team Udayavani, Nov 8, 2017, 9:13 AM IST
ಹೊಸದಿಲ್ಲಿ: ಹಾರ್ದಿಕ್ ಪಾಂಡ್ಯ ಅವರನ್ನು ಧೋನಿಗಿಂತ ಮೊದಲೇ ಬ್ಯಾಟಿಂಗಿಗೆ ಕಳುಹಿಸುವ ಅಗತ್ಯವಿಲ್ಲ, ಆವರು ಕೆಳಗಿನ 6 ಅಥವಾ 7ನೇ ಕ್ರಮಾಂಕದಲ್ಲೇ ಬರುವುದು ಒಳ್ಳೆಯದು ಎಂಬುದಾಗಿ ಟೀಮ್ ಇಂಡಿಯಾದ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್ ಸಲಹೆ ನೀಡಿದ್ದಾರೆ.
“ನ್ಯೂಜಿಲ್ಯಾಂಡ್ ವಿರುದ್ಧದ 4 ಪಂದ್ಯಗಳಲ್ಲಿ ಪಾಂಡ್ಯ ಅವರನ್ನು ಧೋನಿಗಿಂತ ಮೊದಲೇ ಬ್ಯಾಟಿಂಗಿಗೆ ಕಳುಹಿ ಸಲಾಗಿತ್ತು. ಆದರೆ ಅವರನ್ನು ಎಂದಿನ 6-7ನೇ ಕ್ರಮಾಂಕದಲ್ಲೇ ಬ್ಯಾಟಿಂಗಿಗೆ ಇಳಿಸಬೇಕು. ಸೀನಿಯರ್ ಆಗಿರುವ ಧೋನಿ ಅವರೇ ಮೊದಲು ಬ್ಯಾಟಿಂಗಿಗೆ ಬರುವುದು ಒಳ್ಳೆಯದು’ ಎಂದು ಸೆಹವಾಗ್ ಹೇಳಿದರು.
“ರಾಜ್ಕೋಟ್ನಲ್ಲಿ ಪಾಂಡ್ಯ 5ನೇ, ಧೋನಿ 6ನೇ ಕ್ರಮಾಂಕದಲ್ಲಿ ಬಂದರು. ಧೋನಿಯೇ ಮೊದಲು ಬ್ಯಾಟಿಂಗಿಗೆ ಬಂದದ್ದಿದ್ದರೆ ಕೊಹ್ಲಿ ಜತೆ ದೊಡ್ಡ ಜತೆಯಾಟವೊಂದನ್ನು ನಿಭಾಯಿಸಿ ಪಂದ್ಯದ ಗತಿಯನ್ನು ಬದಲಿಸುವ ಸಾಧ್ಯತೆ ಇತ್ತು’ ಎಂಬುದಾಗಿ ವೀರೂ ಅಭಿಪ್ರಾಯಪಟ್ಟರು.