ಪಂತ್‌ ವೈಫ‌ಲ್ಯ: “ಧೋನಿ ಧೋನಿ…’ ಎಂದು ಅಣಕಿಸಿದ ಅಭಿಮಾನಿಗಳು!

Team Udayavani, Nov 12, 2019, 5:11 AM IST

ನಾಗ್ಪುರ: ಧೋನಿ ಉತ್ತರಾಧಿಕಾರಿಯೆಂದೇ ಗುರುತಿಸಲ್ಪಟ್ಟಿರುವ ರಿಷಭ್‌ ಪಂತ್‌, ಇತ್ತೀಚೆಗೆ ಎಲ್ಲ ವಿಭಾಗದಲ್ಲೂ ವಿಫ‌ಲರಾಗುತ್ತಿದ್ದಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಡಿಆರ್‌ಎಸ್‌ ನಿರ್ಧಾರ ತೆಗೆದುಕೊಳ್ಳುವಾಗ ಅವರು ಪ್ರತೀ ಬಾರಿ ನಾಯಕನಿಗೆ ನೀಡಿದ ಸಲಹೆ ತಪ್ಪಾಗಿದೆ. ರವಿವಾರವೂ ಅಂಥದೇ ಒಂದು ಘಟನೆ ನಡೆಯಿತು. ಆಗ ಅಭಿಮಾನಿಗಳು ಧೋನಿ, ಧೋನಿ ಎಂದು ಕೂಗಿ ಪಂತ್‌ ಅವರನ್ನು ಅಣಕಿಸಿದರು. ವಿಕೆಟ್‌ ಕೀಪಿಂಗ್‌ ಕೌಶಲದ ಜತೆಗೆ, ಡಿಆರ್‌ಎಸ್‌ ನಿರ್ಧಾರ ತೆಗೆದುಕೊಳ್ಳುವಲ್ಲಿ ಧೋನಿ ಯಾವಾಗಲೂ ನಿಖರವಾಗಿದ್ದರು. ಅದೇ ಕಾರಣಕ್ಕೆ ಅಭಿಮಾನಿಗಳು ಧೋನಿ ಹೆಸರನ್ನು ಕೂಗಿದ್ದಾರೆ.

ಆಗಿದ್ದೇನು?: ಭಾರತ ನೀಡಿದ 175 ರನ್‌ ಗುರಿಯನ್ನು ಬಾಂಗ್ಲಾದೇಶ ಬೆನ್ನತ್ತುತ್ತಿತ್ತು. ಆಗ ವೇಗಿ ಖಲೀಲ್‌ ಅಹ್ಮದ್‌ ಎಸೆತವೊಂದು ಬ್ಯಾಟ್ಸ್‌ಮನ್‌ ಮೊಹಮ್ಮದ್‌ ನೈಮ್‌ ಪ್ಯಾಡ್‌ಗೆ ಬಡಿದತ್ತು. ಆಗ ರಿಷಭ್‌ ಅವರ ಖಚಿತ ಸಲಹೆ ಕಾರಣ, ರೋಹಿತ್‌ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ಅಲ್ಲಿ ಎಲ್‌ಬಿ ಆಗಲೂ ಸಾಧ್ಯವೇ ಇಲ್ಲ ಎಂದು ಗೊತ್ತಾಯಿತು. ಇದರಿಂದ ಪ್ರೇಕ್ಷಕರು ಸಿಟ್ಟಾಗಿ ರಿಷಭ್‌ ಅವರನ್ನು ಅಣಕಿಸಲು ಶುರುಮಾಡಿದರು. ಪಂದ್ಯ ಮುಗಿದ ಅನಂತರ ಪಂತ್‌ ಅವರನ್ನು ಅಣಕಿಸದಂತೆ ನಾಯಕ ರೋಹಿತ್‌ ಶರ್ಮ ಮನವಿ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ