ಪಾಕ್‌, ಆಸೀಸ್‌ ವಿರುದ್ಧ ಹಾರ್ದಿಕ್‌ ಪಾಂಡ್ಯ ಉತ್ತಮ ಸಾಧನೆ : ಹೆತ್ತವರು ಫ‌ುಲ್‌ ಖುಷ್‌

Team Udayavani, Jun 17, 2019, 4:34 PM IST

ವಡೋದರ : ಇಂಗ್ಲಂಡ್‌ನ‌ಲ್ಲಿ ಪ್ರಕೃತ ಸಾಗುತ್ತಿರುವ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಸವ್ಯಸಾಚಿಯಾಗಿರುವ ತಮ್ಮ ಪುತ್ರ ಹಾರ್ದಿಕ್‌ ಪಾಂಡ್ಯ ತೋರುತ್ತಿರುವ ಸಾಧನೆಗೆ ಆತನ ಹೆತ್ತವರು ಫ‌ುಲ್‌ ಖುಷ್‌ ಆಗಿದ್ದಾರೆ.

ನಿನ್ನೆ ಭಾನುವಾರ ಪಾಕಿಸ್ಥಾನದ ಎದುರು ಭಾರತ ಭರ್ಜರಿ ವಿಜಯ ದಾಖಲಿಸುವಲ್ಲಿ ಬ್ಯಾಟ್‌ ಮೂಲಕ 26 ರನ್‌ ಬಾರಿಸಿ ಎಸೆಗಾರಿಕೆಯ ಮೂಲಕ ಎರಡು ಮಹತ್ವದ ವಿಕೆಟ್‌ಗಳನ್ನು ಕಿತ್ತಿರುವ ಹಾರ್ದಿಕ್‌ ಪಾಂಡ್ಯ ಸಾಧನೆಯ ಬಗ್ಗೆ ಆತನ ಕ್ರಿಕೆಟಿಗ ತಂದೆ ಹಿಮಾಂಶು ಪಾಂಡ್ಯ ಸಂತಸ, ತೃಪ್ತಿ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮೊದಲಿನ ಆಸ್ಟ್ರೇಲಿಯದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ 27 ಎಸೆತಗಳಲ್ಲಿ ಮಿಂಚಿನ 48 ರನ್‌ ಬಾರಿಸಿ ತಂಡದ ವಿಜಯದಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಹಾರ್ದಿಕ್‌ ಪಾಂಡ್ಯ ಅವರ ವಡೋದರ ಮೂಲದ ಹೆತ್ತವರು ತಮ್ಮ ಕುಟುಂಬದ ಇತರ 15 ಮಂದಿಯ ಜತೆಗೂಡಿ ನಿನ್ನೆ ಭಾನುವಾರ ಮ್ಯಾಂಚೆಸ್ಟರ್‌ ನಲ್ಲಿ ನಡೆದಿದ್ದ ಪಾಕ್‌ ವಿರುದ್ಧದ ಪಂದ್ಯವನ್ನು ವೀಕ್ಷಿಸಿ ಭಾರತದ ಭರ್ಜರಿ ಗೆಲುವು ಮತ್ತು ತಮ್ಮ ಪುತ್ರನ ರೋಚಕ ನಿರ್ವಹಣೆಯಿಂದ ರೋಮಾಂಚಿತರಾಗಿದ್ದರು.

“ನಮ್ಮ ಮಗನ ಆಕ್ರಮಣಕಾರಿ ಶೈಲಿಯ ಆಟವು ಭಾರತಕ್ಕೆ ಮುಂದಿನ ಪಂದ್ಯಗಳನ್ನು ಗೆಲ್ಲುವುದಕ್ಕೆ ನೆರವಾಗಲಿದೆ” ಎಂಬ ವಿಶ್ವಾಸವನ್ನು ಹಿಮಾಂಶು ಪಾಂಡ್ಯ ವ್ಯಕ್ತಪಡಿಸಿದರು.

ಹಾರ್ದಿಕ್‌ ಪಾಂಡ್ಯ ಆಕ್ರಮಣಕಾರಿ ಆಟದ ಶೈಲಿಗೆ ಆತನ ತಾಯಿ ನಳಿನಿ ಪಾಂಡ್ಯ ಕೂಡ ಮಾರು ಹೋಗಿದ್ದಾರೆ. ಆತನ ಸಾಧನೆಯ ಬಗೆಗಿನ ಸಂತಸವನ್ನು ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ ಎಂದಾಕೆ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ