Paris; ಚಿನ್ನದ ಪದಕ ಗೆದ್ದ ಚೀನಾ ಆಟಗಾರ್ತಿಗೆ ಕ್ರೀಡಾಂಗಣದಲ್ಲೇ ಪ್ರೇಮ ನಿವೇದನೆ; Video
Team Udayavani, Aug 3, 2024, 1:30 PM IST
ಪ್ಯಾರಿಸ್: ಚೀನಾದ ಬ್ಯಾಡ್ಮಿಂಟರ್ ತಾರೆ ಹುವಾಂಗ್ ಯಕಿಯಾಂಗ್ (Huang Yaqiong) ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) ಶುಕ್ರವಾರ (ಆ 02) ಚಿನ್ನದ ಪದಕ ಗೆದ್ದರು. ಈ ಚಿನ್ನದ ಪದಕ ಜೊತೆಗೆ ಯಕಿಯಾಂಗ್ ಅವರಿಗೆ ಮದುವೆ ಉಂಗುರವೂ ಸಿಕ್ಕಿದೆ.
ಹೌದು ಹುವಾಂಗ್ ಯಕಿಯಾಂಗ್ ಅವರು ಪದಕ ಗೆದ್ದು ಸಂಭ್ರಮಿಸುತ್ತಿರುವಾಗಲೇ ಅವರ ಗೆಳೆಯ ಲಿಯು ಯುಚೇನ್ (Liu Yuchen) ಅವರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಈ ಕ್ಷಣದ ವಿಡಿಯೋ ಇದೀಗ ವೈರಲ್ ಆಗಿದೆ.
ಲಿಯು ಯುಚೇನ್ ಕೂಡಾ ಪ್ಯಾರಿಸ್ ನಲ್ಲಿ ಸ್ಪರ್ಧಿಸುತ್ತಿರುವ ಚೀನಾದ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ. ಬ್ಯಾಡ್ಮಿಂಟನ್ ಪಂದ್ಯಗಳನ್ನು ಆಯೋಜಿಸುವ ಲಾ ಚಾಪೆಲ್ಲೆ ಅರೆನಾದಲ್ಲಿ ಲಿಯು ತನ್ನ ಮೊಣಕಾಲುಗಳನ್ನು ಊರಿ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಮೊದಲ ಚಿನ್ನದ ಪದಕ ಗೆದ್ದ ಹುವಾಂಗ್ ಗೆ ಪ್ರೇಮ ನಿವೇದನೆ ಮಾಡಿದರು.
ಯುಚೇನ್ ಮತ್ತು ಹುವಾಂಗ್ ಅವರ ಈ ಅಪೂರ್ವ ಕ್ಷಣಗಳನ್ನು ಕಂಡ ಲಾ ಚಾಪೆಲ್ಲೆ ಅರೆನಾ ಹರ್ಷೋದ್ಘಾರ ಮಾಡಿತು.
Chinese Olympian Liu Yuchen proposed to Huang Ya Qiong after she won gold🏅🇨🇳 pic.twitter.com/LOqeAKW8HR
— Pubity (@pubity) August 2, 2024
ಹುವಾಂಗ್ ಅವರು ಕೆಲವೇ ಕ್ಷಣಗಳ ಹಿಂದೆ ಮಿಶ್ರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಚಿನ್ನದ ಪದಕ ಕೊರಳಲ್ಲಿ ಇರುವಂತೆ ಗೆಳೆಯ ಯುಚೇನ್ ಅವರು ಪ್ರೇಮ ನಿವೇದನೆ ಮಾಡಿದ್ದಾರೆ. ಲಿಯು ಮದುವೆಯ ಪ್ರಸ್ತಾಪವನ್ನು ಮಾಡಿದಾಗ ಹುವಾಂಗ್ ಭಾವುಕರಾದರು. ಲಿಯು ಮತ್ತು ಸ್ಥಳದಲ್ಲಿ ಕಿಕ್ಕಿರಿದು ತುಂಬಿದ್ದ ಜನಸಮೂಹದ ಸಂತೋಷದಿಂದ ಹರ್ಷೋದ್ಘಾರ ಮಾಡುತ್ತಿದ್ದಂತೆ ಹುವಾಂಗ್ ಲಿಯೊ ಅವರಿಗೆ ಒಪ್ಪಿಗೆ ಸೂಚಿಸಿದರು.
ಇದರ ಬಳಿಕ ಮಾತನಾಡಿದ ಹುವಾಂಗ್ ಅವರು ಪ್ಯಾರಿಸ್‌ನಲ್ಲಿ ನಿಶ್ಚಿತಾರ್ಥದ ಉಂಗುರ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು, ಕ್ರೀಡಾಕೂಟದಲ್ಲಿ ತಾನು ಸಂಪೂರ್ಣವಾಗಿ ಸಿದ್ಧತೆಯತ್ತ ಗಮನಹರಿಸಿದ್ದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ
Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್ ಕಂಬಗಳಿಗೆ ಹಾನಿ
Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ
Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು
Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.