Paris olympics: ಇಥಿಯೋಪಿಯಾದ ಟೋಲ ಮ್ಯಾರಥಾನ್ ಮ್ಯಾನ್
Team Udayavani, Aug 10, 2024, 10:45 PM IST
ಪ್ಯಾರಿಸ್: ಒಲಿಂಪಿಕ್ಸ್ ಪುರುಷರ ಮ್ಯಾರಥಾನ್‌ನಲ್ಲಿ ಕೀನ್ಯಾದ ಪ್ರಭುತ್ವ ಅಂತ್ಯಗೊಂಡಿದೆ. ಶನಿವಾರ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಇಥಿಯೋಪಿಯಾದ ತಾಮಿರತ್ ಟೋಲ ನೂತನ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
ಟೋಲ 2 ಗಂಟೆ, 6 ನಿಮಿಷ, 26 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಒಲಿಂಪಿಕ್ಸ್ ದಾಖಲೆ ಬರೆದರು. ಬೆಲ್ಜಿಯಂನ ಬಶೀರ್ ಅಬ್ದಿ ರಜತ ಗೆದ್ದರು (2 ಗಂಟೆ, 6 ನಿಮಿಷ, 47 ಸೆಕೆಂಡ್). ಟೋಕಿಯೊದಲ್ಲಿ ಇವರು ಕಂಚಿನ ಪದಕ ಜಯಿಸಿದ್ದರು. ಪ್ಯಾರಿಸ್‌ನಲ್ಲಿ ಕೀನ್ಯಾದ ಬೆನ್ಸನ್ ಕಿಪ್ರುಟೊ ಅವರಿಗೆ ಕಂಚು ಒಲಿಯಿತು (2 ಗಂಟೆ, 7 ನಿಮಿಷ). ಎರಡು ಬಾರಿಯ ಹಾಲಿ ಚಾಂಪಿಯನ್, ಕೀನ್ಯದ ಎಲಿಯುಡ್ ಕಿಪೊcàಗೆ ಗುರಿ ಸಾಧಿಸಲು ಚಾಂಪಿಯನ್ ಟೋಲ ಅವರಿಗಿಂತ 8 ನಿಮಿಷಕ್ಕೂ ಹೆಚ್ಚಿನ ಅವಧಿ ತೆಗೆದುಕೊಳ್ಳಬೇಕಾಯಿತು.
ಒಲಿಂಪಿಕ್ಸ್‌ನಲ್ಲಿ ಕೀನ್ಯಾ ಹೊರತಾದ ದೇಶದವರು ಕೊನೆಯ ಸಲ ಚಾಂಪಿಯನ್ ಆದದ್ದು 2012ರ ಲಂಡನ್ ಗೇಮ್ಸ್‌ನಲ್ಲಿ. ಅಂದು ಉಗಾಂಡದ ಸ್ಟೀಫನ್ ಕಿಪ್ರೋಟಿಕ್ ಚಿನ್ನ ಜಯಿಸಿದ್ದರು.
ಐತಿಹಾಸಿಕ ಐಫೆಲ್ ಟವರ್ ಬಳಿ ಮ್ಯಾರಥಾನ್ ಸ್ಪರ್ಧೆ ಅಂತ್ಯಗೊಂಡಿತು. ಇದರೊಂದಿಗೆ ತಾಮಿರತ್ ಟೋಲ 24 ವರ್ಷಗಳ ಬಳಿಕ ಇಥಿಯೋಪಿಯಾಕ್ಕೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ತಂದಿತ್ತ ಹೆಗ್ಗಳಿಕೆಗೆ ಪಾತ್ರರಾದರು. ಅಂದು ಗೆಜಹೇನ್ ಅಬೇರ ಚಾಂಪಿಯನ್ ಆಗಿದ್ದರು (2 ಗಂಟೆ, 10 ನಿಮಿಷ, 11 ಸೆಕೆಂಡ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ
2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.