ಗಂಭೀರ್‌ ಆಯ್ತು, ಇರ್ಫಾನ್‌ ಪಠಾಣ್‌ಗೂ ರಾಜಕಾರಣಿಯಾಗುವ ಬಯಕೆ

Team Udayavani, Apr 24, 2019, 1:42 PM IST

ವಡೋದರಾ : ಕ್ರಿಕೆಟಿಗ ಗೌತಮ್‌ ಗಂಭೀರ್‌ ಬಿಜೆಪಿ ಸೇರ್ಪಡೆಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಾ ಕಣಕ್ಕಿಳಿದ ಬೆನ್ನಲ್ಲೇ ಇನ್ನೋರ್ವ ಸಹಆಟಗಾರ ಇರ್ಫಾನ್‌ ಪಠಾಣ್‌ ರಾಜಕಾರಣಕ್ಕೆ ಬರುವ ಸೂಚನೆ ನೀಡಿದ್ದಾರೆ.

ವಡೋದರಾದಲ್ಲಿ ಮಂಗಳವಾರ ಮತದಾನ ಮಾಡಿದ ಬಳಿಕ ಮಾತನಾಡಿದ ಪಠಾಣ್‌ ನನಗೂ ದೇಶಕ್ಕಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದರು.

ನಾನು ದೇಶಕ್ಕಾಗಿ ಕ್ರಿಕೆಟ್‌ ಆಡಿದ್ದು, ಸಮಯ ಬಂದಾಗ ದೇಶಕ್ಕಾಗಿ ಕೆಲಸ ಮಾಡುವ ಮನಸ್ಸಿದೆ ಎಂದರು.

ಇದೇ ವೇಳೆ ರಾಜಕೀಯ ಕ್ಷೇತ್ರ ಪ್ರವೇಶಕ್ಕಾಗಿ ಗಂಭೀರ್‌ಗೆ ಅಭಿನಂದನೆ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ