ಬಿಸಿಸಿಐ ಜತೆ ಪೇಟಿಎಂ ಮತ್ತೆ 5 ವರ್ಷ ಒಪ್ಪಂದ
Team Udayavani, Aug 22, 2019, 5:36 AM IST
ಹೊಸದಿಲ್ಲಿ: ಬಿಸಿಸಿಐ ಜತೆ ಪೇಟಿಎಂ ಮತ್ತೆ 5 ವರ್ಷಗಳ ಒಪ್ಪಂದ ಮುಂದುವರಿಸಿದೆ. ಬುಧವಾರ ಪರಿಷ್ಕೃತ ಒಪ್ಪಂದವನ್ನು ಬಿಸಿಸಿಐ ಪ್ರಕಟಿಸಿದೆ.
2019ರಿಂದ 2023ರ ತನಕ ಒಟ್ಟಾರೆ 326.80 ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ದೇಶಿ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಒಪ್ಪಂದ ಅನ್ವಯಿಸಲಿದೆ. 2015ರಲ್ಲಿ ಪೇಟಿಎಂ ಜತೆಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿತ್ತು.