ಫಿಕ್ಸಿಂಗ್: ಪಾಕ್ ಕ್ರಿಕೆಟಿಗ ಲತೀಫ್ಗೆ 5 ವರ್ಷ ನಿಷೇಧ
Team Udayavani, Sep 21, 2017, 10:11 AM IST
ಲಾಹೋರ್(ಪಾಕಿಸ್ಥಾನ): ಪಾಕಿಸ್ಥಾನ ಸೂಪರ್ ಲೀಗ್ನಲ್ಲಿ (ಪಿಎಸ್ಎಲ್) ಸ್ಪಾಟ್ ಫಿಕ್ಸಿಂಗ್ ಮಾಡಿರುವ ಆರೋಪದ ಮೇಲೆ ಪಾಕ್ನ ಬ್ಯಾಟ್ಸ್ಮನ್ ಖಾಲೀದ್ ಲತೀಫ್ಗೆ 5 ವರ್ಷ ನಿಷೇಧ ವಿಧಿಸಲಾಗಿದೆ. ಬುಧವಾರ ಅಂತಿಮ ವಿಚಾರಣೆ ನಡೆಸಿದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ನಿಷೇಧದ ಜತೆಗೆ 10 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದ ಮತ್ತೂಬ್ಬ ಆರೋಪಿ ಶಾರ್ಜಿಲ್ ಖಾನ್ಗೆ ಕಳೆದ ತಿಂಗಳು 5 ವಿರ್ಷ ನಿಷೇಧ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.
ಐಪಿಎಲ್ ಮಾದರಿಯಲ್ಲಿಯೇ ಕಳೆದ ಫೆಬ್ರವರಿಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ಥಾನ ಸೂಪರ್ ಲೀಗ್ ಅನ್ನು ಆಯೋಜಿಸಿತ್ತು. ಇಲ್ಲಿ ದೇಶಿ ಆಟಗಾರರ ಜತೆ ವಿದೇಶಿ ಆಟಗಾರರು ವಿವಿಧ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ದುಬೈನಲ್ಲಿ ನಡೆದ ಕೂಟದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ ಜಲಿ ತಂಡಗಳ ನಡುವಿನ ಪಂದ್ಯದ ವೇಳೆ ಲತೀಫ್ ಮತ್ತು ಶಾರ್ಜಿಲ್ ಖಾನ್ ಸ್ಪಾಟ್ ಫಿಕ್ಸಿಂಗ್ ಮಾಡಿರುವುದು ಸಾಬೀತಾಗಿತ್ತು. ಪ್ರಕರಣ ಬೆಳಕಿಗೆ ಬಂದ ತತ್ಕ್ಷಣ ಪಾಕ್ ಮಂಡಳಿ ಇಬ್ಬರು ಕ್ರಿಕೆಟಿಗರನ್ನು ಅಮಾನತು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!