ಪ್ರತಿ ಟೆಸ್ಟ್‌ ಸರಣಿಯಲ್ಲಿ ಪಿಂಕ್‌ ಟೆಸ್ಟ್‌: ಗಂಗೂಲಿ

Team Udayavani, Dec 3, 2019, 11:36 PM IST

ಹೊಸದಿಲ್ಲಿ: ಪ್ರತಿ ಟೆಸ್ಟ್‌ ಸರಣಿಯಲ್ಲಿ ಒಂದು ಪಂದ್ಯವನ್ನು ಪಿಂಕ್‌ ಬಾಲ್‌ ಟೆಸ್ಟ್‌ ಗೆ ಮೀಸಲಿರಿಸುವ ಯೋಚನೆಯಲ್ಲಿದ್ದಾರೆ ಭಾರತೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ. ಬಾಂಗ್ಲಾ ವಿರುದ್ಧ ಚೊಚ್ಚಲ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಯಶಸ್ವಿಯಾಗಿ ನಡೆಸಿದ ಹುರುಪಿನಲ್ಲಿರುವ ಗಂಗೂಲಿ ಮುಂದೆಯೂ ಇಂತಹ ಪಿಂಕ್‌ ಟೆಸ್ಟ್‌ ಆಯೋಜಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಎಲ್ಲ ಸರಣಿಯನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದೆ. ವಿದೇಶಿ ನೆಲ ದಲ್ಲೂ ಭಾರತ ಡೇ-ನೈಟ್‌ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತಿ ಟೆಸ್ಟ್‌ ಪಂದ್ಯದಲ್ಲೊಂದು ಪಿಂಕ್‌ ಟೆಸ್ಟ್‌ ಆಯೋಜನೆ ಮಾಡಬೇಕು ಎನ್ನುವುದು ಗಂಗೂಲಿಯ ನಿಲುವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ