ವೆಸ್ಟ್‌ ಇಂಡೀಸ್‌ ಏಕದಿನ, ಟಿ20ತಂಡಕ್ಕೆ ಪೊಲಾರ್ಡ್‌ ನಾಯಕ

Team Udayavani, Sep 10, 2019, 11:44 AM IST

ಕಿಂಗ್‌ಸ್ಟನ್‌ (ಜಮೈಕಾ), ಸೆ. 9: ವೆಸ್ಟ್‌ ಇಂಡೀಸಿನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಕಳೆದ ವಿಶ್ವಕಪ್‌ ವೈಫ‌ಲ್ಯ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದೆದುರು ವಿಂಡೀಸ್‌ ವೈಟ್ವಾಶ್‌ ಅನುಭವಿಸಿತ್ತು. ಈ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಸಂಸ್ಥೆ ಜಾಸನ್‌ ಹೋಲ್ಡರ್‌ ಮತ್ತು ಕಾರ್ಲೋಸ್‌ ಬ್ರಾತ್‌ವೇಟ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿತು.

32 ವರ್ಷದ ಪೊಲಾರ್ಡ್‌ ಕೊನೆಯ ಸಲ 2016ರಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ವಿಶ್ವಕಪ್‌ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಲಭಿಸಿರಲಿಲ್ಲ. ಅವರು 101 ಏಕದಿನ ಮತ್ತು 62 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ