ಆಸ್ಟ್ರೇಲಿಯಕ್ಕೆ 2-1 ಸರಣಿ,ಖ್ವಾಜಾ ಸರಣಿಶ್ರೇಷ್ಠ: ಪಾಂಟಿಂಗ್ ಭವಿಷ್ಯ
Team Udayavani, Nov 30, 2018, 6:30 AM IST
ಸಿಡ್ನಿ: ಮುಂಬರುವ ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿಯಲ್ಲಿ ಎಲ್ಲರ ನಿರೀಕ್ಷೆಯಂತೆ ಭಾರತ ಮೇಲುಗೈ ಸಾಧಿಸುವುದಿಲ್ಲ, ವಿರಾಟ್ ಕೊಹ್ಲಿ ಸರ್ವಾಧಿಕ ರನ್ ಪೇರಿಸುವುದಿಲ್ಲ; ಬದಲಾಗಿ ಆಸ್ಟ್ರೇಲಿಯ 2-1 ಅಂತರದಿಂದ ಸರಣಿ ಜಯಿಸಲಿದ್ದು, ಉಸ್ಮಾನ್ ಖ್ವಾಜಾ ಅತ್ಯಧಿಕ ರನ್ ಸಾಧನೆಯೊಂದಿಗೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿಸಿದ್ದಾರೆ!
“ಉಸ್ಮಾನ್ ಖ್ವಾಜಾ ಬ್ಯಾಟಿಂಗ್ ಫಾರ್ಮ್ನ ಉತ್ತುಂಗದಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ಅವರ ಸಾಧನೆ ಅಸಾಮಾನ್ಯ. ಭಾರತದ ವೇಗದ ಬೌಲರ್ಗಳಿಗೆ ಅವರು ಖಂಡಿತವಾಗಿಯೂ ಬೆದರಿಕೆಯೊಡ್ಡಲಿದ್ದಾರೆ. ಅವರು ಈ ಸರಣಿಯಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸಿ ಸರ್ವಾಧಿಕ ರನ್ ಗಳಿಸಲಿದ್ದಾರೆ, ಜತೆಗೆ ಸರಣಿಶ್ರೇಷ್ಠರಾಗಿಯೂ ಮೂಡಿಬರಲಿದ್ದಾರೆ’ ಎಂದು ಪಾಂಟಿಂಗ್ ಕ್ರಿಕೆಟ್ ವೆಬ್ಸೈಟ್ ಸಂದರ್ಶನವೊಂದರ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ಪಾಂಟಿಂಗ್ ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದ ಇತಿಹಾಸವನ್ನೂ ಉಲ್ಲೇಖೀಸಿದರು. “ಭಾರತ ಕಳೆದ 40 ವರ್ಷಗಳಿಂದಲೂ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಆಡುತ್ತ ಬಂದಿದೆ. 11 ಸರಣಿಗಳಲ್ಲಿ ಒಂದನ್ನೂ ಗೆದ್ದಿಲ್ಲ. ಕಾರಣ ಇಲ್ಲಿನ ಫಾಸ್ಟ್, ಬೌನ್ಸಿ ಟ್ರ್ಯಾಕ್ಗಳು. ಹೀಗಾಗಿ ಈ ಸಲವೂ ಅವರಿಗೆ ಈ ಸಮಸ್ಯೆ ಎದುರಾಗಲಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ