ಚಾಂಪಿಯನ್ಸ್‌  ಟ್ರೋಫಿ ಹಾಕಿ: ತಂಡಕ್ಕೆ ಮರಳಿದ ಸರ್ದಾರ್‌, ಲಾಕ್ರಾ

Team Udayavani, Jun 1, 2018, 6:00 AM IST

ಹೊಸದಿಲ್ಲಿ: ಮುಂಬರುವ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಗಾಗಿ ಗುರುವಾರ ಭಾರತ ತಂಡವನ್ನು ಅಂತಿಮಗೊಳಿಸಲಾಗಿದೆ. 18 ಸದಸ್ಯರ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸಿವೆ. ಜೂ. 23ರಿಂದ ಹಾಲೆಂಡಿನ ಬ್ರೆಡಾ ದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಪಂದ್ಯಾವಳಿಗಾಗಿ ಮಾಜಿ ನಾಯಕ ಸರ್ದಾರ್‌ ಸಿಂಗ್‌, ಮಿಡ್‌ ಫೀಲ್ಡರ್‌ ಬೀರೇಂದ್ರ ಲಾಕ್ರಾ ಅವರನ್ನು ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಕಾಮನ್ವೆಲ್ತ್‌ ಗೇಮ್ಸ್‌ ವೇಳೆ ಸರ್ದಾರ್‌ ಸಿಂಗ್‌ ಅವರನ್ನು ತಂಡ ದಿಂದ ಕೈಬಿಡಲಾಗಿತ್ತು. ಬೀರೇಂದ್ರ ಲಾಕ್ರಾ ಕೂಡ ಗೋಲ್ಡ್‌ಕೋಸ್ಟ್‌ ಟಿಕೆಟ್‌ ಸಂಪಾದಿಸಿರಲಿಲ್ಲ. ಆದರೆ ಇವರಿಬ್ಬರೂ ಬೆಂಗಳೂರಿನ ತರಬೇತಿ ಶಿಬಿರಕ್ಕೆ ಆಯ್ಕೆಯಾದಾಗ ಮರಳಿ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಸೂಚನೆ ಲಭಿಸಿತ್ತು.

ಪ್ರಮುಖರಿಗೆ ಗೇಟ್‌ಪಾಸ್‌
ಡಿಫೆಂಡರ್‌ಗಳಾದ ರೂಪಿಂದರ್‌ಪಾಲ್‌ ಸಿಂಗ್‌, ಕೊಥಜಿತ್‌ ಸಿಂಗ್‌ ಮತ್ತು ಗುರೀಂದರ್‌ ಸಿಂಗ್‌ ಅವರನ್ನು ಚಾಂಪಿಯನ್ಸ್‌ ಟ್ರೋಫಿ ತಂಡದಿಂದ ಕೈಬಿಡಲಾಗಿದೆ. ಜರ್ಮನ್‌ಪ್ರೀತ್‌ ಸಿಂಗ್‌, ಸುರೇಂದ್ರ ಕುಮಾರ್‌ ಅವ ರನ್ನು ಸೇರಿಸಿಕೊಳ್ಳಲಾಗಿದೆ. ಸ್ಟ್ರೈಕರ್‌ಗಳ ಪೈಕಿ ಲಲಿತ್‌ ಉಪಾಧ್ಯಾಯ ಮತ್ತು ಗುರ್ಜಂತ್‌ ಸಿಂಗ್‌ ಸ್ಥಾನ ಕಳೆದುಕೊಂಡಿದ್ದಾರೆ. ರಮಣ ದೀಪ್‌ ಸಿಂಗ್‌ ಮರಳಿ ಅವಕಾಶ ಪಡೆದಿದ್ದಾರೆ. ತಂಡದ ಗೋಲ್‌ ಕೀಪಿಂಗ್‌ನಲ್ಲೂ ಬದಲಾವಣೆ ಸಂಭವಿಸಿದೆ. ಸೂರಜ್‌ ಕರ್ಕೇರ ಬದಲು ಕೃಷ್ಣ ಬಹಾದೂರ್‌ ಪಾಠಕ್‌ ಬಂದಿದ್ದಾರೆ.

ಕಳೆದ ಸಲ ಬೆಳ್ಳಿ  ಸಾಧನೆ
ಕಳೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಶ್ರೀಜೇಶ್‌ ನೇತೃತ್ವದಲ್ಲೇ ಕಣಕ್ಕಿಳಿದು, 34 ವರ್ಷಗಳ ಬಳಿಕ ಪೋಡಿಯಂ ಏರು ವಲ್ಲಿ ಯಶಸ್ವಿ ಯಾಗಿತ್ತು. ಫೈನಲ್‌ನಲ್ಲಿ ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯಕ್ಕೆ ಸೋತು ಬೆಳ್ಳಿ ಪದಕ ಜಯಿಸಿತ್ತು. ಈ ಸಂದರ್ಭವನ್ನು ಶ್ರೀಜೇಶ್‌ ನೆನ ಪಿಸಿಕೊಂಡಿದ್ದಾರೆ. “ನಾವು ಕಳೆದ ಸಲ ಚಿನ್ನದ ಪದಕಕ್ಕೆ ಹತ್ತಿರವಾಗಿದ್ದೆವು. ಆದರೆ ಆಸ್ಟ್ರೇಲಿಯವನ್ನು ಸೋಲಿಸುವಲ್ಲಿ ಎಡವಿದೆವು. ಹೀಗಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಮ್ಮ ಪಾಲಿಗೆ ಇದೊಂದು ಸ್ಮರಣೀಯ ಪಂದ್ಯಾವಳಿಯಾಗಿತ್ತು. ಕಳೆದ ಸಲಕ್ಕಿಂತ ಉತ್ತಮ ನಿರ್ವಹಣೆ ನೀಡಿ ಈ ಕೂಟವನ್ನೂ ಸ್ಮರಣೀಯಗೊಳಿಸು ವುದು ನಮ್ಮ ಮುಂದಿರುವ ಯೋಜನೆ’ ಎಂದಿದ್ದಾರೆ ಶ್ರೀಜೇಶ್‌.

“ಜಕಾರ್ತಾದಲ್ಲಿ ನಡೆಯಲಿರುವ ಏಶ್ಯನ್‌ ಗೇಮ್ಸ್‌ಗೂ ಮುನ್ನ ಆಟ ಗಾರರ ಸಾಮರ್ಥ್ಯವನ್ನು ಹೊರಗೆಡ ವಲು ಇದೊಂದು ಉತ್ತಮ ಅವಕಾಶ. ಆಸ್ಟ್ರೇಲಿಯ, ಬೆಲ್ಜಿಯಂ, ಹಾಲೆಂಡ್‌, ಆರ್ಜೆಂಟೀನಾದಂಥ ಬಲಿಷ್ಠ ಹಾಗೂ ಉನ್ನತ ದರ್ಜೆಯ ತಂಡಗಳನ್ನು ಎದುರಿಸುವ ಅವಕಾಶ ಇಲ್ಲಿ ಲಭಿಸುತ್ತದೆ. ಹೀಗಾಗಿ ಇದು ವಿಶ್ವಕಪ್‌ಗೆ ಸಮನಾದ ಪಂದ್ಯಾವಳಿ’ ಎಂದು ಶ್ರೀಜೇಶ್‌ ಹೇಳಿದರು. ಜೂ. 23ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲೇ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ.

ಭಾರತ ತಂಡ
ಗೋಲ್‌ ಕೀಪರ್: ಪಿ.ಆರ್‌. ಶ್ರೀಜೇಶ್‌ (ನಾಯಕ), ಕೃಷ್ಣ ಬಹಾದೂರ್‌ ಪಾಠಕ್‌.
ಡಿಫೆಂಡರ್: ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಸುರೇಂದ್ರ ಕುಮಾರ್‌, ಜರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ, ಅಮಿತ್‌ ರೋಹಿದಾಸ್‌.
ಮಿಡ್‌ ಫೀಲ್ಡರ್: ಮನ್‌ಪ್ರೀತ್‌ ಸಿಂಗ್‌, ಚಿಂಗ್ಲೆನ್ಸಾನ ಸಿಂಗ್‌ (ಉಪನಾಯಕ), ಸರ್ದಾರ್‌ ಸಿಂಗ್‌, ವಿವೇಕ್‌ ಪ್ರಸಾದ್‌.
ಫಾರ್ವರ್ಡ್ಸ್‌: ಎಸ್‌.ವಿ. ಸುನೀಲ್‌, ರಮಣದೀಪ್‌ ಸಿಂಗ್‌, ಮನ್‌ದೀಪ್‌ ಸಿಂಗ್‌, ಸುಮಿತ್‌ ಕುಮಾರ್‌ ಜೂನಿಯರ್‌, ಆಕಾಶ್‌ದೀಪ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ