ಅಭ್ಯಾಸ ಪಂದ್ಯ: ವಿಹಾರಿ ಸೆಂಚುರಿ

Team Udayavani, Feb 15, 2020, 6:00 AM IST

ಹ್ಯಾಮಿಲ್ಟನ್‌: ನ್ಯೂಜಿಲ್ಯಾಂಡ್‌ ಇಲೆವೆನ್‌ ಎದುರಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಮೂರೂ ಮಂದಿ ಆರಂಭಿಕರು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಆದರೆ ಹನುಮ ವಿಹಾರಿ ಸೆಂಚುರಿ ಬಾರಿಸಿ ಮೆರೆದಿದ್ದಾರೆ.

ಚೇತೇಶ್ವರ್‌ ಪೂಜಾರ ಏಳೇ ರನ್ನಿನಿಂದ ಶತಕ ತಪ್ಪಿಸಿಕೊಂಡಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 78.5 ಓವರ್‌ ಬ್ಯಾಟಿಂಗ್‌ ನಡೆಸಿ 263 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ.

ಫೆ. 21ರಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಪಂದ್ಯಕ್ಕೆ ಭಾರತದ ಆರಂಭಿಕ ಜೋಡಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯ ಮಹತ್ವದ್ದಾಗಿತ್ತು. ಆದರೆ ಓಪನರ್‌ಗಳಾದ ಮಾಯಾಂಕ್‌ ಅಗರ್ವಾಲ್‌ (1) ಮತ್ತು ಪೃಥ್ವಿ ಶಾ (0) ಘೋರ ವೈಫ‌ಲ್ಯ ಅನುಭವಿಸಿದರು.

4ನೇ ಕ್ರಮಾಂಕದಲ್ಲಿ ಆಡಲಿಳಿದ ಸಂಭಾವ್ಯ ಓಪನರ್‌ ಶುಭಮನ್‌ ಗಿಲ್‌ ಕೂಡ ಖಾತೆ ತೆರೆಯಲು ವಿಫ‌ಲರಾದರು. ಹೀಗೆ 5 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡ ಟೀಮ್‌ ಇಂಡಿಯಾ ಭಾರೀ ಆಘಾತಕ್ಕೆ ಸಿಲುಕಿತು.

ವಿಹಾರಿ ಬ್ಯಾಟಿಂಗ್‌ ವಿಹಾರ
ಸಮಾಧಾನಕರ ಸಂಗತಿಯೆಂದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾರ್ಟ್‌ಟೈಮ್‌ ಓಪನರ್‌ ಆಗಿ ಕಣಕ್ಕಿಳಿದಿದ್ದ ಹನುಮ ವಿಹಾರಿ ಅಮೋಘ ಶತಕದೊಂದಿಗೆ ಭಾರತದ ಸರದಿಯನ್ನು ಆಧರಿಸಿದ್ದು. 182 ಎಸೆತ ಎದುರಿಸಿದ ವಿಹಾರಿ 101 ರನ್‌ ಬಾರಿಸಿ ನಿವೃತ್ತರಾದರು. ಸಿಡಿಸಿದ್ದು 10 ಬೌಂಡರಿ ಹಾಗೂ 3 ಸಿಕ್ಸರ್‌.

ಟೆಸ್ಟ್‌ ಸ್ಪೆಷಲಿಸ್ಟ್‌ ಖ್ಯಾತಿಯ ಚೇತೇಶ್ವರ್‌ ಪೂಜಾರ ಏಳೇ ರನ್‌ ಕೊರತೆಯಿಂದ ಶತಕ ತಪ್ಪಿಸಿಕೊಂಡರು. 211 ಎಸೆತಗಳ ಮ್ಯಾರಥಾನ್‌ ಆಟವಾಡಿದ ಪೂಜಾರ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಪೂಜಾರ-ವಿಹಾರಿ ಅವರ 5ನೇ ವಿಕೆಟ್‌ ಜತೆಯಾಟದಲ್ಲಿ 195 ರನ್‌ ಒಟ್ಟುಗೂಡಿತು. ಆಗ ಭಾರತ ಬೃಹತ್‌ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ 2ನೇ ಕಂತಿನ ಕುಸಿತ ಮೊದಲ್ಗೊಂಡಿತು. ಇದರ ತೀವ್ರತೆ ಎಷ್ಟಿತ್ತೆಂದರೆ, 30 ರನ್‌ ಅಂತರದಲ್ಲಿ ಕೊನೆಯ 6 ವಿಕೆಟ್‌ ವಿಕೆಟ್‌ ಹಾರಿ ಹೋಯಿತು!

ವಿಹಾರಿ, ಪೂಜಾರ ಹೊರತುಪಡಿಸಿದರೆ ಎರಡಂಕೆಯ ಗಡಿ ದಾಟಿದ ಏಕೈಕ ಆಟಗಾರನೆಂದರೆ ಅಜಿಂಕ್ಯ ರಹಾನೆ (18). ಪಂತ್‌ 7ಕ್ಕೆ ಆಟ ಮುಗಿಸಿದರೆ, ಸಾಹಾ ಮತ್ತು ಅಶ್ವಿ‌ನ್‌ ಖಾತೆಯನ್ನೇ ತೆರೆಯಲಿಲ್ಲ. ವಿರಾಟ್‌ ಕೊಹ್ಲಿ ಆಡಲಿಳಿಯಲಿಲ್ಲ.

ಸ್ಕಾಟ್‌ ಕ್ಯುಗೆಲೀನ್‌, ಐಶ್‌ ಸೋಧಿ, ಜೇಕ್‌ ಗಿಬ್ಸನ್‌ ಉತ್ತಮ ಬೌಲಿಂಗ್‌ ಪ್ರದರ್ಶನವಿತ್ತರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಪೃಥ್ವಿ ಶಾ ಸಿ ರವೀಂದ್ರ ಬಿ ಕ್ಯುಗೆಲೀನ್‌ 0
ಅಗರ್ವಾಲ್‌ ಸಿ ಕ್ಲೀವರ್‌ ಬಿ ಕ್ಯುಗೆಲೀನ್‌ 1
ಚೇತೇಶ್ವರ್‌ ಪೂಜಾರ ಸಿ ಕ್ಲೀವರ್‌ ಬಿ ಗಿಬ್ಸನ್‌ 93
ಶುಭಮನ್‌ ಗಿಲ್‌ ಸಿ ಸೀಫ‌ರ್ಟ್‌ ಬಿ ಕ್ಯುಗೆಲೀನ್‌ 0
ಅಜಿಂಕ್ಯ ರಹಾನೆ ಸಿ ಬ್ರೂಸ್‌ ಬಿ ನೀಶಮ್‌ 18
ಹನುಮ ವಿಹಾರಿ ನಿವೃತ್ತ 101
ರಿಷಭ್‌ ಪಂತ್‌ ಸಿ ಕ್ಯುಗೆಲೀನ್‌ ಬಿ ಸೋಧಿ 7
ವೃದ್ಧಿಮಾನ್‌ ಸಾಹಾ ಸಿ ಕ್ಲೀವರ್‌ ಬಿ ಗಿಬ್ಸನ್‌ 0
ಆರ್‌. ಅಶ್ವಿ‌ನ್‌ ಎಲ್‌ಬಿಡಬ್ಲ್ಯು ಸೋಧಿ 0
ಉಮೇಶ್‌ ಯಾದವ್‌ ಔಟಾಗದೆ 9
ರವೀಂದ್ರ ಜಡೇಜ ಸಿ ಅಲೆನ್‌ ಬಿ ಸೋಧಿ 8
ಇತರ 26
ಒಟ್ಟು (ಆಲೌಟ್‌) 263
ವಿಕೆಟ್‌ ಪತನ: 1-0, 2-5, 3-5, 4-38, 5-233, 6-246, 7-246, 8-250, 9-263.
ಬೌಲಿಂಗ್‌:
ಸ್ಕಾಟ್‌ ಕ್ಯುಗೆಲೀನ್‌ 14-2-40-3
ಬ್ಲೇರ್‌ ಟಿಕ್ನರ್‌ 15-3-37-0
ಡ್ಯಾರಿಲ್‌ ಮಿಚೆಲ್‌ 7-1-15-0
ಜೇಮ್ಸ್‌ ನೀಶಮ್‌ 13-3-29-1
ಜೇಕ್‌ ಗಿಬ್ಸನ್‌ 10-1-26-2
ಐಶ್‌ ಸೋಧಿ 14.5-0-72-3
ರಚಿನ್‌ ರವೀಂದ್ರ 5-1-30-0

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ