ಪೃಥ್ವಿ ಶಾ ಪವರ್‌; “ಎ’ ತಂಡಕ್ಕೆ ಮತ್ತೂಂದು ಜಯ

Team Udayavani, Jan 20, 2020, 6:50 AM IST

ಲಿಂಕನ್‌ (ನ್ಯೂಜಿಲ್ಯಾಂಡ್‌): ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಆರಂಭಕಾರ ಪೃಥ್ವಿ ಶಾ ಸ್ಪರ್ಧಾತ್ಮಕ ಕ್ರಿಕೆಟಿಗೆ ಭರ್ಜರಿ ಪುನರಾಗಮನ ಸಾರಿದ್ದಾರೆ. ನ್ಯೂಜಿಲ್ಯಾಂಡ್‌ ಇಲೆವೆನ್‌ ವಿರುದ್ಧದ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಅವರು 100 ಎಸೆತಗಳಿಂದ 150 ರನ್‌ ಸಿಡಿಸಿ ಭಾರತ “ಎ’ ತಂಡದ 12 ರನ್ನುಗಳ ರೋಚಕ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ.

ರವಿವಾರ ಇಲ್ಲಿನ “ಬರ್ಟ್‌ ಸಟ್‌ಕ್ಲಿಫ್ ಓವಲ್‌’ನಲ್ಲಿ ನಡೆದ 2ನೇ ಅಭ್ಯಾಸ ಪಂದ್ಯ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ “ಎ’ 49.2 ಓವರ್‌ಗಳಲ್ಲಿ 372 ರನ್‌ ಪೇರಿಸಿದರೆ, ಇದನ್ನು ಬೆನ್ನಟ್ಟಿಕೊಂಡು ಬಂದ ಆತಿಥೇಯ ಪಡೆ 6 ವಿಕೆಟಿಗೆ 360 ರನ್‌ ಬಾರಿಸಿ ಶರಣಾಯಿತು. ಇದರೊಂದಿಗೆ ಗಿಲ್‌ ಬಳಗ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದಂತಾಯಿತು.

ಶಾ ಬೊಂಬಾಟ್‌ ಆಟ
ಆತಿಥೇಯ ಬೌಲಿಂಗ್‌ ಪಡೆಯ ಮೇಲೆ ಘಾತಕವಾಗಿ ಎರಗಿದ ಪೃಥ್ವಿ ಶಾ 35ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ಭರ್ತಿ 100 ಎಸೆತಗಳಿಂದ 150 ರನ್‌ ಬಾರಿಸಿ ತನ್ನ ಫಾರ್ಮ್ ಏನೆಂಬುದನ್ನು ತೋರ್ಪಡಿಸಿದರು. ಸಿಡಿಸಿದ್ದು 22 ಬೌಂಡರಿ ಹಾಗೂ 2 ಸಿಕ್ಸರ್‌. 8 ತಿಂಗಳ ಡೋಪಿಂಗ್‌ ನಿಷೇಧದ ಬಳಿಕ ರಣಜಿಗೆ ಮರಳಿದ ಶಾ, ಕರ್ನಾಟಕ ಎದುರಿನ ಪಂದ್ಯದ ವೇಳೆ ಗಾಯಾಳಾಗಿದ್ದರು.

ಇದರಿಂದ “ಎ’ ತಂಡದ ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು.
ಶಾ ಜತೆ ಇನ್ನಿಂಗ್ಸ್‌ ಆರಂಭಿಸಿದ ಮಾಯಾಂಕ್‌ ಅಗರ್ವಾಲ್‌ 36 ಎಸೆತಗಳಿಂದ 32 ರನ್‌ ಹೊಡೆದರು (4 ಬೌಂಡರಿ, 1 ಸಿಕ್ಸರ್‌). ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 89 ರನ್‌ ಒಟ್ಟುಗೂಡಿತು. ಭಾರತದ ಸರದಿಯಲ್ಲಿ ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌ಮನ್‌ ವಿಜಯ್‌ ಶಂಕರ್‌. ಅವರ ಗಳಿಕೆ 58 ರನ್‌ (41 ಎಸೆತ, 6 ಬೌಂಡರಿ). ನಾಯಕ ಶುಭಮನ್‌ ಗಿಲ್‌ 24, ಸೂರ್ಯಕುಮಾರ್‌ ಯಾದವ್‌ 26, ಕೀಪರ್‌ ಇಶಾನ್‌ ಕಿಶನ್‌ 14, ಕೃಣಾಲ್‌ ಪಾಂಡ್ಯ 32, ಅಕ್ಷರ್‌ ಪಟೇಲ್‌ 15 ರನ್‌ ಮಾಡಿದರು.

ಜಾಕ್‌ ಬಾಯ್ಲ ಸೆಂಚುರಿ
ದೊಡ್ಡ ಮೊತ್ತವನ್ನು ಕಿವೀಸ್‌ ಭರ್ಜರಿಯಾ ಗಿಯೇ ಚೇಸ್‌ ಮಾಡತೊಡಗಿತು. ಭಾರತದಂತೆ ಆತಿಥೇಯರ ಆರಂಭಿಕನಿಂದಲೂ ಶತಕ ದಾಖಲಾಯಿತು. 44ನೇ ಓವರ್‌ ತನಕ ಬಂಡೆ ಯಂತೆ ನಿಂತ ಜಾಕ್‌ ಬಾಯ್ಲ ಎಸೆತಕ್ಕೊಂದರಂತೆ 130 ರನ್‌ ಬಾರಿಸಿ ಭೀತಿ ಹುಟ್ಟಿಸಿದರು (17 ಬೌಂಡರಿ). ಫಿನ್‌ ಅಲೆನ್‌ 87, ಡೇನ್‌ ಕ್ಲೀವರ್‌ 44, ಡ್ಯಾರಿಲ್‌ ಮಿಚೆಲ್‌ 41 ರನ್‌ ಬಾರಿಸಿ ಹೋರಾಟ ನಡೆಸಿದರೂ ತಂಡವನ್ನು ದಡ ತಲುಪಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌
ಭಾರತ “ಎ’-49.2 ಓವರ್‌ಗಳಲ್ಲಿ 372 (ಶಾ 150, ಶಂಕರ್‌ 58, ಅಗರ್ವಾಲ್‌ 32, ಕೃಣಾಲ್‌ 32, ಮಿಚೆಲ್‌ 37ಕ್ಕೆ 3). ನ್ಯೂಜಿಲ್ಯಾಂಡ್‌ ಇಲೆವೆನ್‌-6 ವಿಕೆಟಿಗೆ 360 (ಬಾಯ್ಲ 130, ಫಿನ್‌ 87, ಕ್ಲೀವರ್‌ 44, ಮಿಚೆಲ್‌ 41, ಕೃಣಾಲ್‌ 57ಕ್ಕೆ 2, ಪೋರೆಲ್‌ 59ಕ್ಕೆ 2).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ