ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಪ್ರವೀಣ್ ತಾಂಬೆ?
Team Udayavani, Jun 26, 2020, 5:21 AM IST
ಹೊಸದಿಲ್ಲಿ: ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ (ಸಿಪಿಎಲ್) ಪಾಲ್ಗೊಳ್ಳಲಿರುವ ಕ್ರಿಕೆಟಿಗರ ಯಾದಿಯೊಂದನ್ನು ಪ್ರಕಟಿಸಲಾಗಿದೆ. ಇದರಲ್ಲಿ 537 ಮಂದಿ ಆಟಗಾರರಿದ್ದು, ಭಾರತದ ಪ್ರವೀಣ್ ತಾಂಬೆ ಹೆಸರು ಕೂಡ ಕಾಣಿಸಿಕೊಂಡಿದೆ. ಈ ಯಾದಿಯಲ್ಲಿರುವ ಮತ್ತೋರ್ವ ಭಾರತೀಯನೆಂದರೆ ಅಸದ್ ಪಠಾಣ್.
48 ವರ್ಷದ ಪ್ರವೀಣ್ ತಾಂಬೆ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾಗ ಮಿಂಚಿದ ಬೌಲರ್. 2013-15ರ ಅವಧಿಯಲ್ಲಿ ತಾಂಬೆ ಈ ತಂಡವನ್ನು ಪ್ರತಿನಿಧಿಸಿದ್ದರು. 2020ರ ಹರಾಜಿನಲ್ಲಿ ಕೆಕೆಆರ್ ಪಾಲಾಗಿದ್ದರು. ಆದರೆ ಮಂಡಳಿ ಅನುಮತಿ ಪಡೆಯದೆ ಟಿ10 ಪಂದ್ಯಾವಳಿಯೊಂದರಲ್ಲಿ ಆಡಿದ ಕಾರಣ ತಾಂಬೆ ಅವರನ್ನು ಬಿಸಿಸಿಐ ಅನರ್ಹಗೊಳಿಸಿತು. ಐಪಿಎಲ್ನಲ್ಲಿ 33 ಪಂದ್ಯಗಳನ್ನಾಡಿದ್ದು, 28 ವಿಕೆಟ್ ಉರುಳಿಸಿದ್ದಾರೆ.