ಸರಣಿ ವಿಜೇತರಿಗೆ ಮೋದಿ ಅಭಿನಂದನೆ
Team Udayavani, Jan 8, 2019, 12:35 AM IST
ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದೊಂದು ಐತಿಹಾಸಿಕ ಸಂಭ್ರಮ ಎಂದು ಟ್ವೀಟ್ ಮಾಡಿದ್ದಾರೆ.
“ಆಸ್ಟ್ರೇಲಿಯ ನೆಲದಲ್ಲಿ ಭಾರತೀಯ ಕ್ರಿಕೆಟಿಗರು ಆಚರಿಸಿದ ಐತಿಹಾಸಿಕ ಸಂಭ್ರಮ ಇದಾಗಿದೆ. ಅಭಿನಂದನೆಗಳು ಟೀಮ್ ಇಂಡಿಯಾ. ಇಂಥದೊಂದು ಗೆಲುವಿಗೆ ನೀವು ಅರ್ಹರಾಗಿದ್ದೀರಿ. ನಿಮ್ಮ ಕಠಿನ ಹೋರಾಟಕ್ಕೆ ಸಂದ ಫಲ ಇದಾಗಿದೆ. ನಿಮ್ಮ ಮುಂದಿನೆಲ್ಲ ಸರಣಿಗಳಿಗೂ ಶುಭಕಾಮನೆಗಳು’ ಎಂದು ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.