ಹರಿಯಾಣಕ್ಕೆ ಶರಣಾದ ಮುಂಬಾ


Team Udayavani, Oct 5, 2017, 6:10 AM IST

PTI10_4_2017_000163a.jpg

ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಐದರ ಚೆನ್ನೈ ಚರಣದ ಎ ವಲಯದ ಬುಧವಾರದ ಮೊದಲ ಪಂದ್ಯದಲ್ಲಿ ಎರಡು ಬಾರಿ ಆಲೌಟ್‌ ಸಂಕಟಕ್ಕೆ ಸಿಲುಕಿದ ಮುಂಬಾ ತಂಡ 30-41 ಅಂಕಗಳಿಂದ ಹರಿಯಾಣ ಸ್ಟೀಲರ್ಗೆ ಶರಣಾಯಿತು.

ಇಲ್ಲಿನ ಜವಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದ ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಕಾದಾಟ ನಡೆಸಿದವು. ಆದರೆ ವಿಕಾಸ್‌ ಖಂಡೋಲ, ವಜೀರ್‌ ಸಿಂಗ್‌ ಮತ್ತು ದೀಪಕ್‌ ಕುಮಾರ್‌ ದಹಿಯ ಅವರ ಭರ್ಜರಿ ಆಟದಿಂದಾಗಿ ಹರಿಯಾಣ ಮೇಲುಗೈ ಸಾಧಿಸಿತು. 2 ಬಾರಿ ಮುಂಬಾ ಆಲೌಟ್‌ಗೆ ಗುರಿಯಾದ ಕಾರಣ ಸೋಲು ಕಾಣುಂತಾಯಿತು. ಈ ಗೆಲುವಿನಿಂದ ಹರಿಯಾಣ ತಾನಾಡಿದ ಒಟ್ಟು 19 ಪಂದ್ಯಗಳಿಂದ 10ನೇ ಗೆಲುವು ದಾಖಲಿಸಿ 64 ಅಂಕ ಪಡೆದು ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಮುಂಬಾಗೂ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಅದು ಗೆಲ್ಲಬೇಕಾದ ಅನಿವಾರ್ಯತೆಯಿದೆ.

ದ್ವಿತೀಯ ಅವಧಿ ಆರಂಭವಾಗಿ 8 ನಿಮಿಷ ಮುಗಿದಾಗ ವಿಕಾಸ್‌ ಸ್ನಾಯು ಸೆಳತಕ್ಕೆ ಒಳಗಾದರು. ಆಬಳಿಕ ಅವರು ಅಂಗಣಕ್ಕೆ ಬರಲಿಲ್ಲ. ಆದರೂ ಹರಿಯಾಣ ದೀಪಕ್‌ ಮತ್ತು ವಜೀರ್‌ ಅವರ ಮಿಂಚಿನಾಟದಿಂದ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ವಿಕಾಸ್‌ 8 ಅಂಕ ಪಡೆದರೆ ದೀಪಕ್‌ ಕುಮಾರ್‌ ದಹಿಯ 8 ಅಂಕ ಮತ್ತು ವಜೀರ್‌ ಸಿಂಗ್‌ 7 ಅಂಕ ಗಳಿಸಿದರು.
ಮುಂಬಾ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಿದ ನಾಯಕ ಅನೂಪ್‌ ಕುಮಾರ್‌ 10 ಅಂಕ ಪಡೆದರೆ, ಶ್ರೀಕಾಂತ್‌ ಜಾಧವ್‌ 5 ಅಂಕ, ಅಡಕೆ ಮತ್ತು ಶಬ್ಬೀರ್‌ 3 ಮೂರು ಅಂಕ ಗಳಿಸಿದರು.

ಹರಿಯಾಣ ಮುನ್ನಡೆ
ಮೊದಲ ನಿಮಿಷದಲ್ಲಿಯೇ ಅನೂಪ್‌ ಅವರನ್ನು ಹಿಡಿದು ಹರಿಯಾಣ ಮುನ್ನಡೆ ಸಾಧಿಸಿದರೂ 4ನೇ ನಿಮಿಷದಲ್ಲಿ ಮುಂಬಾ 3-3ರಿಂದ ಸಮಬಲ ಸಾಧಿಸಲು ಯಶಸ್ವಿಯಾಯಿತು. ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಮೊದಲ 10 ನಿಮಿಷದ ಆಟ ಮುಗಿದಾಗ 8-6ರಿಂದ ಹರಿಯಾಣ ಮುನ್ನಡೆಯಲ್ಲಿತ್ತು.

12ನೇ ನಿಮಿಷದಲ್ಲಿ ಅನೂಪ್‌ ಸೂಪರ್‌ ರೈಡ್‌ ಮೂಲಕ ಮೂರಂಕ ಪಡೆದು ಮುಂಬಾಗೆ ಮುನ್ನಡೆ ಒದಗಿಸಿದರು. ಆದರೆ ಆಬಳಿಕ ವಿಕಾಸ್‌ ಖಂಡೋಲ ಭರ್ಜರಿ ಆಟ ಆಡಿದ್ದರಿಂದ ಹರಿಯಾಣದ ಮೊತ್ತ ಏರತೊಡಗಿತು. ರೈಡ್‌ ಮತ್ತು ಟ್ಯಾಕಲ್‌ನಲ್ಲಿ ಮಿಂಚಿದ ಹರಿಯಾಣ 17ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್‌ ಮಾಡಿಸಿ ಮುನ್ನಡೆಯನ್ನು 19-14ಕ್ಕೇರಿಸಿತು. ಮೊದಲ ಅವಧಿಯ ಆಟ ಮುಗಿದಾಗ ಹರಿಯಾಣ 22-16ರಿಂದ ಮುನ್ನಡೆ ಸಾಧಿಸಿತ್ತು.

ದ್ವಿತೀಯ ಅವಧಿ ಆರಂಭವಾಗಿ 8ನೇ ನಿಮಿಷದಲ್ಲಿ ವಿಕಾಸ್‌ ಸ್ನಾಯು ಸೆಳೆತಕ್ಕೆ ಒಳಗಾಗಿ ಅಂಗಣದಿಂದ ಹೊರನಡೆದರು. ಅವರು ಮತ್ತೆ ಅಂಗಣಕ್ಕೆ ಇಳಿಯಲಿಲ್ಲ. ಆಬಳಿಕ ದೀಪಕ್‌ ಮತ್ತು ವಝೀರ್‌ ಭರ್ಜರಿ ಆಟವಾಡಿದ್ದರಿಂದ ಹರಿಯಾಣದ ಮುನ್ನಡೆ ಏರತೊಡಗಿತು. ಪಂದ್ಯ ಮುಗಿಯಲು 5 ನಿಮಿಷವಿರುವಾಗ ಮುಂಬಾ ಎರಡನೇ ಬಾರಿ ಆಲೌಟಾಯಿತು. ಅಂತಿಮವಾಗಿ 30-41ರಿಂದ ಹರಿಯಾಣಕ್ಕೆ ಶರಣಾಯಿತು.

– ಶಂಕರನಾರಾಯಣ.ಪಿ

ಟಾಪ್ ನ್ಯೂಸ್

ಮನಸ್ಮಿತ ಹಾಡು ಹಬ್ಬ : ಜೂನ್‌ನಲ್ಲಿ ತೆರೆಗೆ

ಮನಸ್ಮಿತ ಹಾಡು ಹಬ್ಬ: ಜೂನ್‌ನಲ್ಲಿ ತೆರೆಗೆ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

1-saadasd

ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಕೋಲ್ಕತಾ ಸಜ್ಜು

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

9accident

ಟ್ರ್ಯಾಕ್ಟರ್-ಬೈಕ್ ಢಿಕ್ಕಿ: ತಂದೆ ಮಗ ಸಾವು

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

1-f-sdfsdf

ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

MUST WATCH

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

ಹೊಸ ಸೇರ್ಪಡೆ

12arrest

ನಾಲ್ವರು ಸುಲಿಗೆಕೋರರ ಬಂಧನ

un-resolve

ಬಗೆಹರಿಯದ ಮೇಯರ್‌ ಆಯ್ಕೆ ವಿವಾದ

11waadi

ಸಂವಿಧಾನ ಉಳಿಯದಿದ್ದರೆ ಸೌರ್ಹಾದತೆಗೆ ಧಕ್ಕೆ: ಅಪ್ಪಗೇರೆ

ಹೊರಬಂತು “ಶುಭಮಂಗಳ” ಟೀಸರ್‌

ಹೊರಬಂತು “ಶುಭಮಂಗಳ” ಟೀಸರ್‌

jds

ಸರ್ಕಾರದಿಂದ ರೈತರ ನಿರ್ಲಕ್ಷ್ಯ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.