ಪ್ರೊ ಕಬಡ್ಡಿ: ಪುನೇರಿ ಹ್ಯಾಟ್ರಿಕ್ ಜಯಭೇರಿ
Team Udayavani, Jan 27, 2022, 9:25 PM IST
ಬೆಂಗಳೂರು: ಪುನೇರಿ ಪಲ್ಟಾನ್ ಹ್ಯಾಟ್ರಿಕ್ ಜಯಭೇರಿ ಮೊಳಗಿಸಿದೆ. ಗುರುವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಅದು ಯುಪಿ ಯೋಧ ಪಡೆಯನ್ನು 44-38 ಅಂತರದಲ್ಲಿ ಮಣಿಸಿತು.
14 ಪಂದ್ಯಗಳಲ್ಲಿ ಪುನೇರಿ ಸಾಧಿಸಿದ 7ನೇ ಜಯ ಇದಾಗಿದೆ. ಆದರೆ ಯೋಧ ಇಷ್ಟೇ ಪಂದ್ಯಗಳಿಂದ 6ನೇ ಸೋಲನುಭವಿಸಿತು. ಐದನ್ನು ಮಾತ್ರ ಗೆದ್ದಿರುವ ಯೋಧ, ಮೂರನ್ನು ಟೈ ಮಾಡಿಕೊಂಡಿದೆ.
ಪುನೇರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ರೈಡರ್‌ಗಳಾದ ಮೋಹಿತ್ ಗೋಯತ್ ಮತ್ತು ಅಸ್ಲಾಮ್ ಇನಾಮಾªರ್. ಇವರು ಕ್ರಮವಾಗಿ 14 ಮತ್ತು 12 ಅಂಕ ಗಳಿಸಿ ಕೊಟ್ಟರು. ರೈಟ್ ಕವರ್ ಡಿಫೆಂಡರ್ ಅಬಿನೇಶ್ ನಾದರಾಜನ್ 4 ಅಂಕ ತಂದಿತ್ತರು.
ವಿರಾಮದ ವೇಳೆ 21-18 ಅಂತರದ ಸಣ್ಣ ಲೀಡ್ ಹೊಂದಿದ್ದ ಪುನೇರಿ, ದ್ವಿತೀಯಾರ್ಧದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿ ತು. ಯೋಧ ಕೂಡ ಉತ್ತಮ ರೀತಿಯಲ್ಲೇ ಸೆಣಸಾಡಿತು. ಆದರೆ ತಂಡದ ಹೋರಾಟ ರೈಡರ್ ಸುರೇಂದರ್ ಗಿಲ್ ಅವರಿಗಷ್ಟೇ ಸೀಮಿತಗೊಂಡಿತು. ಗಿಲ್ ಬರೋ ಬ್ಬರಿ 16 ಅಂಕ ತಂದಿತ್ತರು. ಪ್ರದೀಪ್ ನರ್ವಾಲ್ 6 ಅಂಕ ಗಳಿಸಿ ಈ ಕೂಟದಲ್ಲಿ ತಮ್ಮ ರೈಡಿಂಗ್ ಅಂಕ ವನ್ನು ನೂರಕ್ಕೆ ಏರಿಸಿದರು.
ಇಂದಿನ ಪಂದ್ಯ :
ಪಾಟ್ನಾ ಪೈರೆಟ್ಸ್ vs ತಮಿಳ್ ತಲೈವಾಸ್ ಆರಂಭ: 7.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ