ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಭರ್ಜರಿ ಗೆಲುವು

Team Udayavani, Aug 26, 2019, 5:59 AM IST

ಹೊಸದಿಲ್ಲಿ: ಪ್ರೊ ಕಬಡ್ಡಿ ಕೂಟದ ಹೊಸದಿಲ್ಲಿ ಚರಣದ ರವಿವಾರದ ಮುಖಾಮುಖೀಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಭರ್ಜರಿ ಜಯ ಸಾಧಿಸಿದೆ. 41-30 ಅಂಕಗಳಿಂದ ಜೈಪುರ ತಂಡವನ್ನು ಸೋಲಿಸಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ದಬಾಂಗ್‌ ಡೆಲ್ಲಿ 36-27 ಅಂತರದಿಂದ ಯುಪಿ ಯೋಧಾವನ್ನು ಮಣಿಸಿತು. ಇದು ತವರಿನಲ್ಲಿ ಡೆಲ್ಲಿಗೆ ಒಲಿದ ಸತತ 2ನೇ ಗೆಲುವು. ಈ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು (39). ಜೈಪುರ್‌ 2ನೇ ಸ್ಥಾನಕ್ಕೆ ಇಳಿಯಿತು (37). ಬೆಂಗಾಲ್‌ 3ನೇ (33), ಬೆಂಗಳೂರು 4ನೇ ಸ್ಥಾನದಲ್ಲಿದೆ (33).

ಮಿಂಚಿದ ರೋಹಿತ್‌
ಬೆಂಗಳೂರಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ನಾಯಕ ರೋಹಿತ್‌ ಕುಮಾರ್‌. 19 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿಹೋದ ಅವರು 13 ಅಂಕ ಗಳಿಸಿದರು. ಇವರಿಗೆ ಎಂದಿನಂತೆ ಪವನ್‌ ಸೆಹ್ರಾವತ್‌ ಉತ್ತಮ ನೆರವು ನೀಡಿ 8 ಅಂಕ ತಂದಿತ್ತರು. ಆದರೆ ಸೆಹ್ರಾವತ್‌ ಸಹಜ ಆಟ ಈ ಪಂದ್ಯದಲ್ಲಿ ಕಾಣಲಿಲ್ಲ. ರಕ್ಷಣೆಯಲ್ಲಿ ಬೆಂಗಳೂರು ಪರ ಮಿಂಚಿದ್ದು ಮಹೇಂದರ್‌ ಸಿಂಗ್‌. ಅವರು 6 ಬಾರಿ ಟ್ಯಾಕಲ್‌ನಲ್ಲಿ ಯಶಸ್ಸು ಸಾಧಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ