ಪ್ರೊ ಕಬಡ್ಡಿ: ಡೆಲ್ಲಿ-ಬೆಂಗಾಲ್‌ ಫೈನಲ್‌ ಕಾಳಗ

Team Udayavani, Oct 17, 2019, 6:00 AM IST

ಅಹ್ಮದಾಬಾದ್‌: ಲೀಗ್‌ ಹಂತದ ಮೊದಲೆರಡು ಸ್ಥಾನ ಅಲಂಕರಿಸಿದ ದಬಾಂಗ್‌ ಡೆಲ್ಲಿ ಮತ್ತು ಬೆಂಗಾಲ್‌ ವಾರಿಯರ್ 7ನೇ ಪ್ರೊ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ಕಾಳಗಕ್ಕೆ ಅಣಿಯಾಗಿವೆ. ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್‌ ಆಗಿ ಹೊರಹೊಮ್ಮಲಿವೆ.

ಬುಧವಾರ ನಡೆದ ಸೆಮಿಫೈನಲ್‌ ಮುಖಾ ಮುಖೀಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮತ್ತು ಯು ಮುಂಬಾ ಪರಾಭವಗೊಂಡವು. ಮೊದಲ ಸೆಣಸಾಟದಲ್ಲಿ ದಬಾಂಗ್‌ ಡೆಲ್ಲಿ 44-38 ಅಂತರದಿಂದ ಬುಲ್ಸ್‌ ತಂಡವನ್ನು ಕೆಡವಿತು. ಅನಂತರದ ರೋಚಕ ಮುಖಾಮುಖೀಯಲ್ಲಿ ಬೆಂಗಾಲ್‌ 37-35 ಅಂಕಗಳಿಂದ ಮುಂಬಾವನ್ನು ಮನೆಗಟ್ಟಿತು.

ಪವನ್‌ ಹೋರಾಟ ವ್ಯರ್ಥ
ಪವನ್‌ ಸೆಹ್ರಾವತ್‌ (18 ರೈಡಿಂಗ್‌ ಅಂಕ) ಪ್ರಚಂಡ ರೈಡಿಂಗ್‌ ಪ್ರದರ್ಶಿಸಿದರು. ಬೆಂಗಳೂರು ಬುಲ್ಸ್‌ ತಂಡವನ್ನು ಗೆಲ್ಲಿಸುವ ಎಲ್ಲ ಪ್ರಯತ್ನ ನಡೆಸಿದರು. ಮತ್ತೂಮ್ಮೆ ವನ್‌ ಮ್ಯಾನ್‌ ಆರ್ಮಿಯಾಗಿ ಮಿಂಚಿದರು. ಡೆಲ್ಲಿಗೆ ಕಬ್ಬಿಣದ ಕಡಲೆಯಾದರು. ಆದರೆ ಉಳಿದ ಆಟಗಾರರು ಕಳಪೆ ಆಟವಾಡಿದರು.

ಬುಲ್ಸ್‌ಗೆ ತಿವಿದ ನವೀನ್‌, ಚಂದ್ರನ್‌
ಡೆಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿತು. ನವೀನ್‌ ಕುಮಾರ್‌ (15 ರೈಡಿಂಗ್‌ ಅಂಕ) ಹಾಗೂ ಚಂದ್ರನ್‌ ರಂಜಿತ್‌ (9 ಆಲ್‌ರೌಂಡರ್‌ ಅಂಕ) ಭರ್ಜರಿ ಪ್ರದರ್ಶನವಿತ್ತರು.

ನವೀನ್‌ ಕುಮಾರ್‌ 22 ರೈಡಿಂಗ್‌ ಮಾಡಿದರು. 13 ಟಚ್‌ ಪಾಯಿಂಟ್‌ ಜತೆಗೆ 2 ಬೋನಸ್‌ ಅಂಕವನ್ನೂ ತಂದಿತ್ತರು. ಅವರಿಗೆ ಮತ್ತೂಂದು ತುದಿಯಲ್ಲಿ ಚಂದ್ರನ್‌ ರಂಜಿತ್‌ ಆಲ್‌ರೌಂಡ್‌ ಆಟದ ಮೂಲಕ ನೆರವು ನೀಡಿದರು.

ಉಳಿದಂತೆ ವಿಜಯ್‌ (3 ಅಂಕ), ರವೀಂದರ್‌ ಪಹಾಲ್‌ (3 ಟ್ಯಾಕಲ್‌ ಅಂಕ), ಜೋಗಿಂದರ್‌ ನರ್ವಾಲ್‌ (3 ಟ್ಯಾಕಲ್‌ ಅಂಕ) ಗೆಲುವಿಗಾಗಿ ಶ್ರಮಿಸಿದರು.

ಪವನ್‌ ಏಕಾಂಗಿ ಹೋರಾಟ
ಹಾಲಿ ಚಾಂಪಿಯನ್ಸ್‌ ಬುಲ್ಸ್‌ಗೆ ಪವನ್‌ ಸೆಹ್ರಾವತ್‌ ಎಂಬ ಬೆಂಕಿ ಬಿರುಗಾಳಿಯ ರೈಡರ್‌ ಪ್ರಮುಖ ಶಕ್ತಿಯಾಗಿದ್ದರು. ನಿರೀಕ್ಷೆಯಂತೆ ಅವರು ಅದ್ಭುತ ರೈಡಿಂಗ್‌ ಪ್ರದರ್ಶಿಸಿದರು.

ರಕ್ಷಣಾ ವಿಭಾಗದಲ್ಲಿ ಅನುಭವಿಸಿದ ಭಾರೀ ವೈಫ‌ಲ್ಯ ಬೆಂಗಳೂರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಮಹೇಂದರ ಸಿಂಗ್‌ (2 ಟ್ಯಾಕಲ್‌ ಅಂಕ), ಸೌರಭ್‌ ನಂದಲ್‌ (2 ಟ್ಯಾಕಲ್‌ ಅಂಕ) ಹಾಗೂ ಅಂಕಿತ್‌ (0) ವೈಫ‌ಲ್ಯ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ