ಮುಂಬಾವನ್ನು ಮಣಿಸಿದ ಹರ್ಯಾಣ

ಜೈಪುರವನ್ನು 31-24ರಿಂದ ಕೆಡವಿದ ಯುಪಿ ಯೋಧಾ

Team Udayavani, Aug 19, 2019, 10:39 PM IST

ಚೆನ್ನೈ: ಸೋಮವಾರದ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ ಮತ್ತು ಯುಪಿ ಯೋಧಾ ತಂಡಗಳು ಜಯ ಸಾಧಿಸಿವೆ.

ಮೊದಲ ಪಂದ್ಯದಲ್ಲಿ ಹರ್ಯಾಣ 30-27 ಅಂತರದಿಂದ ಯು ಮುಂಬಾ ಸೋಲಿಸಿದರೆ, ಇನ್ನೊಂದು ಮುಖಾಮುಖೀಯಲ್ಲಿ ಯುಪಿ ಯೋಧಾ 31-24 ಅಂಕಗಳಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ ಆಘಾತವಿಕ್ಕಿತು.

ಹರ್ಯಾಣದ ರೋಚಕ ಜಯಕ್ಕೆ ನೆರವಾದವರು ದಾಳಿಗಾರ ವಿಕಾಸ್‌ ಕಂಡೊಲ. ಅವರು 21 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 9 ಸಲ ಯಶಸ್ಸು ಸಾಧಿಸಿದರು. ರಕ್ಷಣಾ ವಿಭಾಗದಲ್ಲಿ ರವಿಕುಮಾರ್‌ ಉತ್ತಮ ಸಾಧನೆ ಮಾಡಿದರು. ಅವರು ಕೇವಲ 4 ಯತ್ನದಲ್ಲಿ 3 ಅಂಕ ಗಳಿಸಿದರು.

ಮುಂಬಾ ಕೊನೆಯ ಹಂತದ ತನಕ ದಿಟ್ಟ ಹೋರಾಟ ನೀಡಿತು. ಅಭಿಷೇಕ್‌ ಸಿಂಗ್‌, ಫ‌ಜೆಲ್‌ ಅಟ್ರಾಚೆಲಿ ಉತ್ತಮ ಪ್ರದರ್ಶನ ನೀಡಿದರು. ದಾಳಿಗಾರ ಅಭಿಷೇಕ್‌ 9 ಬಾರಿ ಹರ್ಯಾಣ ಕೋಟೆಗೆ ನುಗ್ಗಿ 6 ಅಂಕ ಗಳಿಸಿದರು. ಅಟ್ರಾಚೆಲಿ 5 ಯತ್ನದಲ್ಲಿ 4 ಅಂಕ ಗಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯ ಮೂರನೇ ದಿನ ದಸ್ಸಾ ಸಿಸ್ಟಮ್ಸ್‌, ಅರ್ಸೆಲಾರ್‌ ಮಿತ್ತಲ್‌, ಭಾರತ್‌ ಫೋರ್ಜ್‌, ಲಾಕಿಡ್‌ ಮಾರ್ಟಿನ್‌,...

  • ಬೆಳಗಾವಿ: ಮಂಗಳೂರು ಬಾಂಬ್‌ ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಭದ್ರತೆ ಮತ್ತು ಬಾಂಬ್‌ ಸ್ಕ್ವಾಡ್‌ ಕಲ್ಪಿಸಲು ಅಧಿಕಾರಿಗಳಿಗೆ...

  • ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ವಿವಾದಾತ್ಮಕ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯದ ಬಿಜೆಪಿ ಸರ್ಕಾರ ಆದೇಶ...

  • ಬೆಂಗಳೂರು: ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ನಡೆದ ಪಲ್ಸ್‌ ಪೊಲಿಯೋ ಲಸಿಕಾ ಕಾರ್ಯಕ್ರಮ ಬುಧವಾರಕ್ಕೆ ಅಂತ್ಯವಾಗಿದ್ದು, ಮುಂದಿನ ಹತ್ತು ದಿನಗಳು ಲಸಿಕೆಯಿಂದ...

  • ಕುಮಟಾ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪೊಲೀಸರ ಅಣಕು ಪ್ರದರ್ಶನ ಎಂದು ಹೇಳಿಕೆ ನೀಡಿರುವುದು...