100ನೇ ಪಂದ್ಯ: ಗುಜರಾತ್ ವಿಜಯ
Team Udayavani, Dec 8, 2018, 6:00 AM IST
ಹೈದರಾಬಾದ್: ಶುಕ್ರವಾರ ಮೊದಲ್ಗೊಂಡ ಪ್ರೊ ಕಬಡ್ಡಿಯ ಹೈದರಾಬಾದ್ ಆವೃತ್ತಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ಸೋಲಿನ ಆರಂಭ ಕಂಡುಕೊಂಡಿದೆ. ಅದು ಗುಜರಾತ್ ವಿರುದ್ಧ 27-29ರಿಂದ ಎಡವಿತು. ಇದು ಪ್ರಸಕ್ತ ಪ್ರೊ ಕಬಡ್ಡಿ ಕೂಟದ 100ನೇ ಪಂದ್ಯವಾಗಿತ್ತು. ತಾರಾ ರೈಡರ್ಗಳಾದ ಪ್ರಪಂಚನ್ ಹಾಗೂ ಸಚಿನ್ ಸಾಹಸ ಮಯ ಆಟ ಪ್ರದರ್ಶಿಸಿ ಗುಜರಾತ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೆಚ್ಚುವರಿ ಆಟಗಾರ ರಕ್ಷಿತ್ ಕೊನೆಯಲ್ಲಿ ತೆಲುಗು ಟೈಟಾನ್ಸ್ಗೆ 3 ಅಂಕ ತಂದುಕೊಟ್ಟು ಗೆಲುವಿನ ಆಸೆ ಚಿಗುರಿಸಿದರಾದರೂ ಇದರಿಂದ ಪ್ರಯೋಜನವಾಗಲಿಲ್ಲ.
ಗುಜರಾತ್ ಅಬ್ಬರದ ಆಟ
ಗುಜರಾತ್ ತಂಡದ ಪರ ತಾರಾ ರೈಡರ್ ಕೆ. ಪ್ರಪಂಚನ್ (10 ಅಂಕ) ಹಾಗೂ ಸಚಿನ್ (9 ಅಂಕ) ರೈಡಿಂಗ್ ಮೂಲಕ ಎದುರಾಳಿ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದರು. ತೆಲುಗು ಟೈಟಾನ್ಸ್ನ ಅನುಭವಿ ರೈಡರ್ ರಾಹುಲ್ ಚೌಧರಿ ತಂಡದ ಪರ ವೈಯಕ್ತಿಕ ಸರ್ವಾಧಿಕ 8 ಅಂಕ ದಾಖಲಿಸಿದರು. ಉಳಿದಂತೆ ಎಲ್ಲ ರೈಡರ್ಗಳು ವಿಫಲವಾದ್ದರಿಂದ ಟೈಟಾನ್ಸ್ ಕೊನೆಯಲ್ಲಿ 2 ಅಂಕಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು.
ಪಾಟ್ನಾ ಪೈರೇಟ್ಸ್ ಗೆಲುವು
ದ್ವಿತೀಯ ಪಂದ್ಯದಲ್ಲಿ ಪಾಟ್ನಾ ತಂಡ ಪುನೇರಿ ವಿರುದ್ಧ 53-36 ಅಂತರದ ಜಯ ಒಲಿಸಿಕೊಂಡಿತು.
ಇಂದಿನ ಪಂದ್ಯಗಳು
1. ಮುಂಬಾ-ಬೆಂಗಾಲ್
ಸ್ಥಳ: ಹೈದರಾಬಾದ್
ಆರಂಭ: ರಾತ್ರಿ 8.00
2. ತೆಲುಗು-ಜೈಪುರ್
ಸ್ಥಳ: ಹೈದರಾಬಾದ್
ಆರಂಭ: ರಾತ್ರಿ 9.00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ