ಪ್ರೊ ಕಬಡ್ಡಿ: ಜೈಪುರ-ಗುಜರಾತ್‌ ಪಂದ್ಯ ಟೈ

ಯುಪಿ ಯೋಧಾ ವಿರುದ್ಧ ತಲೈವಾಸ್‌ಗೆ ಭಾರೀ ಸೋಲು

Team Udayavani, Sep 21, 2019, 10:45 PM IST

ಜೈಪುರ: ಜೈಪುರ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 28-28 ಅಂಕಗಳ ರೋಚಕ ಟೈ ಸಾಧಿಸಿತು. ದಿನದ ದ್ವಿತೀಯ ಮುಖಾಮುಖೀಯಲ್ಲಿ ಯುಪಿ ಯೋಧಾ 42-22 ಅಂತರದಿಂದ ತಮಿಳ್‌ ತಲೈವಾಸ್‌ಗೆ ಸೋಲುಣಿಸಿತು.
ರೈಡರ್‌ ನಿತಿನ್‌ ರಾವಲ್‌ ಅವರನ್ನು ಗುಜರಾತ್‌ನ ಪರ್ವೇಶ್‌ ಬೈನ್‌ಸ್ವಾಲ್‌ ಅದ್ಭುತವಾಗಿ ಟ್ಯಾಕಲ್‌ ಮಾಡಿದ್ದರಿಂದಾಗಿ ಜೈಪುರಕ್ಕೆ ಜಯ ತಪ್ಪಿತು. ಹೀಗಾಗಿ ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಜೈಪುರಕ್ಕೆ ಸ್ವಲ್ಪ ಹಿನ್ನಡೆಯಾದಂತಾಗಿದೆ. ಇನ್ನೊಂದೆಡೆ ಗುಜರಾತ್‌ಗೆ ಈ ಸಾಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಅದು ಕೂಟದಿಂದ ಹೊರಬೀಳುವ ಸ್ಥಿತಿಯಲ್ಲಿದೆ.
* ಗಮನ ಸೆಳೆದ ವಿಶಾಲ್‌
ಜೈಪುರ ಪರ ವಿಶಾಲ್‌ 9 ಟ್ಯಾಕಲ್‌ ನಡೆಸಿದರು. ಗುಜರಾತ್‌ ರೈಡರ್‌ಗಳಿಗೆ ಅಪಾಯಕಾರಿಯಾಗಿ ಗೋಚರಿಸಿದರು.ಆದರೆ ರೈಡಿಂಗ್‌ನಲ್ಲಿ ಜೈಪುರ ವಿಫ‌ಲವಾಯಿತು. ಪ್ರಮುಖ ರೈಡರ್‌ ದೀಪಕ್‌ ಹೂಡಾ ಕೇವಲ 4 ಅಂಕ ತಂದರು. 18 ರೈಡಿಂಗ್‌ ಮಾಡಿದ್ದ ದೀಪಕ್‌ ಹೂಡಾ 10 ಸಲ ಎದುರಾಳಿ ಕೋಟೆಯಿಂದ ಬರಿಗೈಯಿಂದ ವಾಪಸ್‌ ಆದರು.
ಗುಜರಾತ್‌ ಪರ ರೈಡಿಂಗ್‌ನಲ್ಲಿ ಸಚಿನ್‌ 5 ಅಂಕ ಮಾತ್ರ ಗಳಿಸಿದರು. ಉಳಿದಂತೆ ಪರ್ವೇಶ್‌ 5 ಟ್ಯಾಕಲ್‌ ಅಂಕ, ಜಿ.ಬಿ. ಮೋರೆ 3 ಟ್ಯಾಕಲ್‌ ಅಂಕ ಸೇರಿದಂತೆ 4 ಅಂಕ, ಸುನೀಲ್‌ ಕುಮಾರ್‌, ರೋಹಿತ್‌ ಗುಲಿಯಾ, ಪಂಕಜ್‌ 3 ಟ್ಯಾಕಲ್‌ ಅಂಕ ಪಡೆದರು. ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಗುಜರಾತ್‌ ಹೆಚ್ಚು ಯಶಸ್ಸು ಪಡೆಯಿತು.

**
ಮತ್ತೆ ಸೋತ ತಲೈವಾಸ್‌
ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಯುಪಿ ಯೋಧಾ ನಿಧಾನವಾಗಿ ಚಿಗುರುತ್ತಿದೆ. ಅದು ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರದ ಎರಡನೇ ಪಂದ್ಯದಲ್ಲಿ ದುರ್ಬಲ ತಮಿಳ್‌ ತಲೈವಾಸ್‌ ತಂಡವನ್ನು 42-22 ಅಂಕಗಳ ಭಾರೀ ಅಂತರದಿಂದ ಸೋಲಿಸಿತು. ಇದರೊಂದಿಗೆ ಯುಪಿ ಯೋಧಾ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಯುಪಿ ಗೆಲುವಿನಲ್ಲಿ ರೈಡರ್‌ ಶ್ರೀಕಾಂತ್‌ ಜಾಧವ್‌ (8 ಅಂಕ), ಸುರಿಂದರ್‌ ಗಿಲ್‌ (7 ರೈಡಿಂಗ್‌ ಅಂಕ) ಹಾಗೂ ಸುಮಿತ್‌ ನಗಾಲ್‌ (5 ಟ್ಯಾಕಲ್‌ ಅಂಕ) ಮಿಂಚಿದರು. ತಲೈವಾಸ್‌ ತಾರಾ ರೈಡರ್‌ ರಾಹುಲ್‌ ಚೌಧರಿ (5 ಅಂಕ) ವೈಫ‌ಲ್ಯ ಅನುಭವಿಸಿದರು. ಅಜಿತ್‌ ಕುಮಾರ್‌ (4 ರೈಡಿಂಗ್‌ ಅಂಕ)ನಿಂದ ತಂಡಕ್ಕೆ ಸ್ವಲ್ಪ ನೆರವಾದರು. ತಮಿಳ್‌ ತಲೈವಾಸ್‌ ಮತ್ತೂಮ್ಮೆ ಮುಖಭಂಗ ಅನುಭವಿಸಿತು. ಒಟ್ಟಾರೆ ಕೂಟದಲ್ಲಿ ಸರಣಿ ಸೋಲಿನ ಕಳಪೆ ಪ್ರದರ್ಶನ ಮುಂದುವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ