ಠಾಕೂರ್ ದಾಳಿಗೆ ಬೆಚ್ಚಿದ ಗುಜರಾತ್
Team Udayavani, Aug 11, 2019, 5:14 AM IST
ಅಹ್ಮದಾಬಾದ್: ಅಹ್ಮದಾಬಾದ್ ಚರಣದ ಮೊದಲ ದಿನದ ಪ್ರೊ ಕಬಡ್ಡಿ ಕಾಳಗದಲ್ಲಿ ತಮಿಳ್ ತಲೈವಾಸ್ ಆತಿಥೇಯ ಗುಜರಾತ್ ಫಾರ್ಚೂನ್ಜೈಂಟ್ಸ್ಗೆ 34-28 ಅಂಕಗಳ ಆಘಾತವಿಕ್ಕಿದೆ.
ದಿನದ ದ್ವಿತೀಯ ಮುಖಾಮುಖೀಯಲ್ಲಿ ದಬಾಂಗ್ ಡೆಲ್ಲಿ 32-30 ಅಂತರದಿಂದ ಪುನೇರಿಗೆ ಸೋಲುಣಿಸಿತು.
ಅಜಯ್ ಠಾಕೂರ್ ಪರಾಕ್ರಮ
ಶನಿವಾರ ನಡೆದ ಪಂದ್ಯದಲ್ಲಿ ತಲೈವಾಸ್ ಅತ್ಯಂತ ಚುರುಕಿನ ಆಟ ಪ್ರದರ್ಶಿಸಿತು. ತಾರಾ ರೈಡರ್ ಅಜಯ್ ಠಾಕೂರ್ (9 ಅಂಕ) ಅದ್ಭುತ ರೈಡಿಂಗ್ ಪ್ರದರ್ಶಿಸಿದರು. ಇವರಿಗೆ ಮೋಹಿತ್ ಚಿಲ್ಲಾರ್ (5 ಅಂಕ) ಟ್ಯಾಕಲ್ನಿಂದ ಉತ್ತಮ ಸಾಥ್ ನೀಡಿದರು. ಇವರಿಬ್ಬರು ಮೊದಲ ಅವಧಿಯಿಂದಲೇ ಬಿರುಸಿನ ಆಟಕ್ಕಿಳಿದರು. ಈ ಹಂತದಲ್ಲಿ ಗುಜರಾತ್ ಕೂಡ ತಕ್ಕ ತಿರುಗೇಟು ನೀಡಿತ್ತು. ಒಂದು ಹಂತದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದ್ದವು.
ತಲೈವಾಸ್ ತಂಡದ ಉಳಿದ ಆಟಗಾರರಾದ ಮಂಜೀತ್ ಚಿಲ್ಲಾರ್ (4 ಅಂಕ), ರಾಹುಲ್ ಚೌಧರಿ (4 ಅಂಕ) ಕೂಡ ಉತ್ತಮ ಪ್ರದರ್ಶನ ನೀಡಿದರು. ತಲೈವಾಸ್ ತನ್ನ ಹಿಂದಿನ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ 28-28 ಅಂಕಗಳ ರೋಚಕ ಟೈ ಸಾಧಿಸಿದ್ದನ್ನು ಸ್ಮರಿಸಬಹುದು.
ರೋಹಿತ್ ಹೋರಾಟ ವ್ಯರ್ಥ
ತಾರಾ ರೈಡರ್ ರೋಹಿತ್ ಗುಲಿಯಾ (9 ಅಂಕ), ಸುನೀಲ್ ಕುಮಾರ್ (6 ಅಂಕ) ಮತ್ತು ಸಚಿನ್ (5 ಅಂಕ) ಗುಜರಾತ್ ಗೆಲುವಿಗಾಗಿ ಶ್ರಮಿಸಿದರೂ ಇವರ ಪ್ರಯತ್ನ ಫಲ ಕೊಡಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್