ಪ್ರೊ ಕಬಡ್ಡಿ: ಸೂಪರ್‌ ಪ್ಲೇ ಆಫ್ ಗೆ ನಿಕಟ ಸ್ಪರ್ಧೆ


Team Udayavani, Oct 3, 2017, 6:10 AM IST

PRo-2017-02.jpg

ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿ ಈಗಾಗಲೇ 2 ತಿಂಗಳು ಮುಗಿದಿದ್ದು, ಇನ್ನೆರಡು ವಾರಗಗಳಲ್ಲಿ ಸೂಪರ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವ ಅಗ್ರ 6 ತಂಡಗಳು ಯಾವುದೆಂದು ನಿರ್ಧಾರವಾಗಲಿದೆ.

ಈಗ ಚೆನ್ನೈ ಚರಣದಲ್ಲಿ ಪಂದ್ಯಗಳು ಸಾಗುತ್ತಿದ್ದು, ಇನ್ನು ಜೈಪುರ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಅನಂತರ ಎರಡೂ ವಲಯಗಳ ತಲಾ 3 ಅಗ್ರ ತಂಡಗಳ ನಡುವೆ ಸೂಪರ್‌ ಪ್ಲೇ ಆಫ್ ಹೋರಾಟ ನಡೆಯಲಿದ್ದು ಅ. 28 ರಂದು ಫೈನಲ್‌ ನಡೆಯಲಿದೆ.

ಸದ್ಯದ ತಂಡಗಳ ಬಲಾಬಲವನ್ನು ಗಮನಿಸಿದಾಗ ಎ ವಲಯದಲ್ಲಿ ಅಗ್ರ ಐದು ತಂಡಗಳಿಗೆ ಸೂಪರ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವ ಅವಕಾಶವಿದೆ. ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತಿರುವ ದಬಾಂಗ್‌ ಡೆಲ್ಲಿ ಹೊರಬಿದ್ದಿದೆ.
ಆದರೆ “ಬಿ’ ವಲಯದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಮತ್ತು ಬೆಂಗಾಲ್‌ ವಾರಿಯರ್ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿವೆ. ಆದರೆ 3 ನೇ ಸ್ಥಾನಕ್ಕಾಗಿ ಯುಪಿ ಯೋಧಾ, ತೆಲುಗು ಟೈಟಾನ್ಸ್‌, ತಮಿಳ್‌ ಮತ್ತು ಬೆಂಗಳೂರು ನಡುವೆ ಸ್ಪರ್ಧೆಯಿದೆ. ಇದರಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಯುಪಿ ಯೋಧಾಗೆ ಮುನ್ನಡೆಯುವ ಅವಕಾಶ ಹೆಚ್ಚು.

ಯುಪಿ ಯೋಧರಿಗೆ ಹೆಚ್ಚು ಅವಕಾಶ
ರವಿವಾರದ ಪಂದ್ಯದಲ್ಲಿ ಜೈಪುರ ವಿರುದ್ಧ ಬೋನಸ್‌ ಅಂಕದ ಆಧಾರದಲ್ಲಿ ಗೆಲುವು ಪಡೆದ ಬೆಂಗಾಲ್‌ ಸದ್ಯ ತಾನಾಡಿದ 19 ಪಂದ್ಯಗಳಲ್ಲಿ 64 ಅಂಕಗಳೊಂದಿಗೆ “ಬಿ’ ವಲಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪಾಟ್ನಾ  66 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು ಈ ಎರಡು ತಂಡಗಳು ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಖಚಿತವಾಗಿದೆ.

ಯುಪಿ ತಾನಾಡಿದ 18 ಪಂದ್ಯಗಳಿಂದ 49 ಅಂಕ ಗಳಿಸಿ 3ನೇ ಸ್ಥಾನದಲ್ಲಿದ್ದರೆ, ತೆಲುಗು 43 ಅಂಕಗಳಿಂದ 4ನೇ ಸ್ಥಾನದಲ್ಲಿದೆ. ತಲಾ 34 ಅಂಕ ಹೊಂದಿರುವ ತಮಿಳ್‌ ಮತ್ತು ಬೆಂಗಳೂರು ತಂಡಗಳು ಕೊನೆಯ 2 ಸ್ಥಾನದಲಿವೆ.

ತವರಿನ ಚರಣದ ಆರಂಭದ ಮೂರು ಪಂದ್ಯಗಳಲ್ಲಿ ಸೋತಿರುವ ತಮಿಳ್‌ ತಲೈವಾಸ್‌ಗೆ ಸೂಪರ್‌ ಪ್ಲೇ ಆಫ್ ಹಾದಿ ದುರ್ಗಮವೆಂದೇ ಹೇಳಬಹುದು. ತವರಿನಲ್ಲಿ ತಮಿಳ್‌ ಇನ್ನು 3 ಪಂದ್ಯಗಳನ್ನಾಡಲಿದೆ. “ಬಿ’ ವಲಯದಲ್ಲಿರುವ ತೆಲುಗು, ಯುಪಿ ಮತ್ತು ಬೆಂಗಳೂರು ವಿರುದ್ಧವೇ ತಮಿಳ್‌ ಹೋರಾಡಬೇಕಾಗಿದ್ದು, ಈ ಮೂರರಲ್ಲೂ ಜಯ ಒಲಿಸಿಕೊಳ್ಳಬೇಕಾಗಿದೆ.

ಇನ್ನುಳಿದ 5 ಪಂದ್ಯಗಳಲ್ಲಿ ಗೆದ್ದರೆ ಬೆಂಗಳೂರು ಬುಲ್ಸ್‌ಗೂ ಮುನ್ನಡೆಯುವ ಅವಕಾಶವಿದೆ. ಆದರೆ ಇನ್ನುಳಿದ 4 ಪಂದ್ಯಗಳಲ್ಲಿ ಎರಡರಲ್ಲಿ ಜಯ ಪಡೆದರೆ ಯುಪಿ ಸುಲಭವಾಗಿ 3ನೇ ತಂಡವಾಗಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗಲಿದೆ.

“ಎ’ ವಲಯ ಕಠಿನ
ಚೆನ್ನೈ ಚರಣದಲ್ಲಿ ಆಡಿದ 2 ಪಂದ್ಯಗಳಲ್ಲಿ ಗೆದ್ದಿರುವ ಪುನೇರಿ ಪಲ್ಟಾನ್ಸ್‌ “ಎ’ ವಲಯದ ಬಲಿಷ್ಠ ತಂಡವಾಗಿ ಮೂಡಿಬಂದಿದೆ. ಸದ್ಯ 3ನೇ ಸ್ಥಾನದಲ್ಲಿದ್ದರೂ ಪುನೇರಿ ಈವರೆಗೆ ಕೇವಲ 14 ಪಂದ್ಯಗಳನ್ನಾಡಿದ್ದು, 11 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಏಕೈಕ ತಂಡವಾಗಿದೆ. ಕೇವಲ ಮೂರರಲ್ಲಷ್ಟೇ ಸೋತಿದೆ. ಅಗ್ರಸ್ಥಾನದಲ್ಲಿರುವ ಗುಜರಾತ್‌ಗಿಂತ ಕೇವಲ ಐದಂಕದ ಹಿನ್ನೆಡೆಯಲ್ಲಿದೆ. ಇನ್ನು ತವರಿನಲ್ಲಿ ಆಡಬೇಕಾಗಿರುವ ಪುನೇರಿ ಗರಿಷ್ಠ ಗೆಲುವು ಸಾಧಿಸಿ ಅಗ್ರಸ್ಥಾನಕ್ಕೇರುವ ಸಾಧ್ಯತೆ ಹೆಚ್ಚು.

10 ಪಂದ್ಯಗಳಲ್ಲಿ ಗೆದ್ದಿರುವ ಗುಜರಾತ್‌ 62 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಹರಿಯಾಣ ಸ್ಟೀಲರ್  (59 ಅಂಕ) ದ್ವಿತೀಯ ಸ್ಥಾನದಲ್ಲಿದೆ. 4 ಮತ್ತು 5ನೇ ಸ್ಥಾನದಲ್ಲಿರುವ ಯು ಮುಂಬಾ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಗೂ ಮುನ್ನಡೆಯುವ ಅವಕಾಶವಿದೆ. 15 ಪಂದ್ಯಗಳಿಂದ 44 ಅಂಕ ಗಳಿಸಿರುವ ಜೈಪುರ ಕೂಡ ತವರಿನಲ್ಲಿ ಆಡಬೇಕಾಗಿದೆ. ತವರಿನಲ್ಲಿ 6 ಪಂದ್ಯ ಆಡಲಿರುವ ಜೈಪುರ ಗರಿಷ್ಠ ಗೆಲುವು ಪಡೆದು ಮುನ್ನಡೆಯಲು ಪ್ರಯತ್ನಿಸಬಹುದು. ಕೇವಲ 4 ಪಂದ್ಯ ಗೆದ್ದಿರುವ ಡೆಲ್ಲಿ ಹೊರಬಿದ್ದಿದೆ.

ಗೆಲುವು ಖುಷಿ ನೀಡಿದೆ
ಜೈಪುರ ವಿರುದ್ಧದ ರೋಚಕ ಗೆಲುವು ಖುಷಿ ನೀಡಿದೆ. ಮಣಿಂದರ್‌ ಸಿಂಗ್‌ ಅದ್ಭುತ ರೀತಿಯಲ್ಲಿ ಆಡವಾಡಿದರು. ಅವರು ತಂಡದ ಪವರ್‌ಫ‌ುಲ್‌ ರೈಡರ್‌ ಎಂದು ಬೆಂಗಾಲ್‌ ಕೋಚ್‌ ಜಗದೀಶ್‌ ಕುಂಬ್ಳೆ ಹೇಳಿದ್ದಾರೆ. ತವರಿನಲ್ಲಿ  ತಮಿಳ್‌ ಸತತ 3 ಪಂದ್ಯ ಸೋತಿರಬಹುದು. ಆದರೆ ಮುಂದಿನ ಆರು ಪಂದ್ಯಗಳಲ್ಲಿ ಗೆದ್ದರೆ ತಮಿಳ್‌ಗೆ ಮತ್ತೆ ಯುಪಿ ಯೋಧಾಗೆ ಅವಕಾಶವಿದೆ ಎಂದೂ ಕುಂಬ್ಳೆ ಅಭಿಪ್ರಾಯಪಟ್ಟರು.

ಇನ್ನೂ ಅವಕಾಶವಿದೆ: ರಿಷಾಂಕ್‌
ಪುನೇರಿ ಪಲ್ಟಾನ್ಸ್‌ಗೆ ನಾವು ಒಂದು ಅಂಕದಿಂದ ಸೋತಿರಬಹುದು. ಆದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶ ಇನ್ನೂ ಇದೆ ಎಂದು ಕನ್ನಡಿಗ ಯುಪಿ ಯೋಧಾ ತಂಡದ ಖ್ಯಾತ ರೈಡರ್‌ ರಿಷಾಂಕ್‌ ದೇವಾಡಿಗ ಹೇಳಿದ್ದಾರೆ.

– ಶಂಕರನಾರಾಯಣ ಪಿ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.