ಪ್ರೊ ಕಬಡ್ಡಿ ಲೀಗ್‌: ತೆಲುಗು ಟೈಟಾನ್ಸ್‌ಗೆ ನಾಲ್ಕನೇ ಸೋಲು


Team Udayavani, Aug 3, 2017, 7:25 AM IST

solu.jpg

ಹೈದರಾಬಾದ್‌: ಎರಡೂ ತಂಡಗಳ ಸಂಘಟನಾತ್ಮಕ ಹೋರಾಟದ ಫ‌ಲವಾಗಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳು 5ನೇ ಆವೃತ್ತಿ ಪ್ರೊ ಕಬಡ್ಡಿ ಪಂದ್ಯದಲ್ಲಿ ಡ್ರಾ ಸಾಧಿಸಿವೆ. ಹೀಗಾಗಿ ಎರಡೂ ತಂಡಗಳಿಗೂ ಸಮಾನ ಅಂಕ ಹಂಚಿಕೆಯಾಗಿದೆ. 

ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವು ಬೆಂಗಾಲ್‌ ವಾರಿಯರ್ ವಿರುದ್ಧ 24 30 ಅಂಕಗಳಿಂದ ಸೋಲನ್ನು ಕಂಡಿದೆ. ಇದು ತೆಲುಗು ಟೈಟಾನ್ಸ್‌ ತಂಡದ ಸತತ ನಾಲ್ಕನೇ ಸೋಲು ಆಗಿದೆ.

ತಾರಾ ಆಟಗಾರ ಮಣಿಂದರ್‌ ಸಿಂಗ್‌ ಮತ್ತು ಜಾಂಗ್‌ ಕುನ್‌ ಲೀ ಅವರ ಶ್ರೇಷ್ಠ ಆಟದ ನೆರವಿನಿಂದ ಬೆಂಗಾಲ್‌ ವಾರಿಯರ್ ತಂಡ ತೆಲುಗು ಟೈಟಾನ್ಸ್‌ ವಿರುದ್ಧ ಜಯ ಸಾಧಿಸಿದೆ. ಪಂದ್ಯದ ಆರಂಭದಲ್ಲಿಯೇ ಟೈಟಾನ್ಸ್‌ಗೆ ಹಿನ್ನಡೆ ಆರಂಭವಾಯಿತು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬೆಂಗಾಲ್‌ 19-14ರಿಂದ ಮುನ್ನಡೆ ಪಡೆದಿತ್ತು. ತಾರಾ ಆಟಗಾರ ರಾಹುಲ್‌ ಚೌಧರಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸದಿರುವುದೇ ಟೈಟಾನ್ಸ್‌ ವೈಫ‌ಲ್ಯಕ್ಕೆ ಕಾರಣವಾಯಿತು. ಬೆಂಗಾಲ್‌ಪರ ಮಣಿಂದರ್‌ ಸಿಂಗ್‌ 11, ಜಾಂಗ್‌ ಕುನ್‌ ಲೀ 8 ಅಂಕ ಪಡೆದರು. ಟೈಟಾನ್ಸ್‌ ಪರ ಚೌಧರಿ ಮತ್ತು ನಿಲೇಶ್‌ ಸಿಂದೆ ತಲಾ 5 ಅಂಕ ಪಡೆದರು.

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್‌ ಮತ್ತು ಹರಿಯಾಣ 27-27 ಅಂಕ ಗಳಿಂದ ಸಮಬಲ ಸಾಧಿಸಿದವು. ಪಂದ್ಯದ ಆರಂಭದಲ್ಲಿಯೂ ಸಮಬಲದ ಹೋರಾಟವಿತ್ತು. ಹೀಗಾಗಿ ಅಂಕ 7-7, ಮತ್ತೂಮ್ಮೆ 8-8ರಲ್ಲಿ ಸಮಬಲದಲ್ಲಿದ್ದವು. ಆದರೆ ಈ ಸಮಯದಲ್ಲಿ ಗುಜರಾತ್‌ ಎಚ್ಚರಿಕೆಯ ಪ್ರದರ್ಶನ ನೀಡಿತು. ಇದರ ಫ‌ಲವಾಗಿ ಗುಜರಾತ್‌ ಮೊದಲ ಅವಧಿಯ ಅಂತ್ಯದಲ್ಲಿ 11-8ರಿಂದ ಮುನ್ನಡೆ ಪಡೆಯಲು ಯಶಸ್ವಿಯಾಯಿತು.

ಕೊನೆ 10 ನಿಮಿಷದಲ್ಲಿ ಸ್ಥಿತಿ ಬದಲು: 2ನೇ ಅವಧಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್‌ ಒಂದು ಹಂತದಲ್ಲಿ 22-13ರಿಂದ ಭಾರೀ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಗುಜರಾತ್‌ ಜಯ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ಮುಂದೆ ಆಗಿದ್ದೆ ಬೇರೆ. 

ಹರಿಯಾಣ ತಂಡ ತನ್ನ ರಕ್ಷಣಾ ಕೋಟೆಯನ್ನು ಭದ್ರಪಡಿಸಿಕೊಂಡಿತು. ಜತೆಗೆ ರೈಡಿಂಗ್‌ನಲ್ಲಿಯೂ ಅಂಕ ತರತೊಡಗಿತು. ಹೀಗಾಗಿ ಪಂದ್ಯ ಮುಗಿಯಲು 7 ನಿಮಿಷ ಬಾಕಿ ಇರುವಾಗ 23-23 ರಿಂದ ಸಮಬಲ ಸಾಧಿಸುವಲ್ಲಿ ಯಶ ಕಂಡಿತು. ಅನಂತರ ಎರಡೂ ತಂಡಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಪಂದ್ಯ 27-27ರಿಂದ ಸಮಬಲದಲ್ಲಿ ಅಂತ್ಯಗೊಂಡಿತು. ಈ ಫ‌ಲಿತಾಂಶದಿಂದಾಗಿ ಗುಜರಾತ್‌ ತಂಡ ಎರಡನೇ ಗೆಲುವು ದಾಖಲಿಸುವ ಅವಕಾಶ ತಪ್ಪಿಸಿಕೊಂಡಿತು. ಗುಜರಾತ್‌ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿತ್ತು.

ಗುಜರಾತ್‌ ಪರ ಸುಕೇಶ್‌, ಸುನೀಲ್‌, ಪರ್ವೇಶ್‌, ಸಚಿನ್‌ ತಲಾ 3 ಅಂಕ ಪಡೆದರು. ಹರಿಯಾಣ ಪರ ಸುರೇಂದರ್‌ ನಾಡಾ ಮತ್ತು ವಿಕಾಸ್‌ ತಲಾ 7 ಅಂಕ ಪಡೆದರು. ಎರಡೂ ತಂಡಗಳು ತಲಾ 1 ಬಾರಿ ಆಲೌಟ್‌ಗೆ ತುತ್ತಾದವು.

ಟಾಪ್ ನ್ಯೂಸ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.