ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್
Team Udayavani, Jan 11, 2022, 11:00 PM IST
ಬೆಂಗಳೂರು: ಕನ್ನಡಿಗ ಪ್ರಶಾಂತ್ ಕುಮಾರ್ ರೈ ನಾಯಕತ್ವದ ಪಾಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇದರ ಪರಿಣಾಮ ದಬಾಂಗ್ ಡೆಲ್ಲಿ, ಬೆಂಗಳೂರು ಬುಲ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಕುಸಿದಿವೆ.
ಮಂಗಳವಾರ ನಡೆದ ಪಂದ್ಯದಲ್ಲಿ ಪಾಟ್ನಾ ತಂಡ 43-23 ಅಂಕಗಳಿಂದ ಯು ಮುಂಬಾ ತಂಡವನ್ನು ಸೋಲಿಸಿತು.
ಪಂದ್ಯದ ಆರಂಭದಿಂದಲೇ ಪಾಟ್ನಾ ಪೈರೇಟ್ಸ್ ಮುನ್ನಡೆ ಸಾಧಿಸಿತ್ತು. ಇದನ್ನು ಸರಿದೂಗಿ ಸ ಲು ಮುಂಬಾಗೆ ಆಗಲೇ ಇಲ್ಲ. ಮೊದಲ ಇಪ್ಪತ್ತು ನಿಮಿಷಗಳಲ್ಲಿ ಪಾಟ್ನಾ 19, ಮುಂಬಾ ಕೇವಲ 9 ಅಂಕ ಗಳಿಸಿತ್ತು. ಬಾಕಿ ಇಪ್ಪತ್ತು ನಿಮಿಷಗಳಲ್ಲಿ ಮುಂಬಾ ತುಸು ಸುಧಾರಿತ ಆಟವಾಡಿತು.
ಹಾಗಿದ್ದರೂ ಪಾಟ್ನಾ 24, ಮುಂಬಾ 14 ಅಂಕ ಗಳಿಸಿತು. ಒಟ್ಟಾರೆ ಎರಡೂ ಅವಧಿಗಳಲ್ಲಿ ಮೆರೆದ ಪಾಟ್ನಾ ತಂಡ ನಿರ್ಣಾಯಕವಾಗಿ 20 ಅಂಕಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಪಾಟ್ನಾ ರಕ್ಷಣೆಯಲ್ಲಿ ಅದು ಭರ್ಜರಿ ಯಶಸ್ಸು ಸಾಧಿಸಿತು. ಆ ತಂಡದ ರಕ್ಷಣಾ ಆಟಗಾರ ನೀರಜ್ ಕುಮಾರ್ 10 ಬಾರಿ ಎದುರಾಳಿಯನ್ನು ಟ್ಯಾಕಲ್ ಮಾಡಲು ಯತ್ನಿಸಿದರು. ಅದರಲ್ಲಿ 8 ಬಾರಿ ಯಶಸ್ವಿಯಾಗಿ 8 ಅಂಕ ಸಂಪಾದಿಸಿದರು. ಇನ್ನು ರೈಡಿಂಗ್ ನಲ್ಲಿ ನಾಯಕ ಪ್ರಶಾಂತ್ ಕುಮಾರ್ ಅತ್ಯುತ್ತಮ ಯಶಸ್ಸು ಸಾಧಿಸಿದರು. ಅವರು 7 ಬಾರಿ ಮುಂಬಾ ಕೋಟೆ ಪ್ರವೇಶಿಸಿ 7 ಅಂಕ ಸಂಪಾದಿಸಿದರು. ಸಚಿನ್ ಕೂಡ 7 ಅಂಕ ಸಂಪಾದಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಇನ್ನೂ ಗೆಲು ವಿನ ಖಾತೆ ತೆರೆಯaದ ತೆಲುಗು ಟೈಟಾನ್ಸ್ ತಂಡ ಗುಜರಾತ್ ವಿರುದ್ಧ 22-40 ಅಂತರದ ಹೀನಾಯ ಸೋಲು ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ