ಪ್ರೊ ಕಬಡ್ಡಿ: 50 ಕೋ.ರೂ., 200 ಆಟಗಾರರ ಹರಾಜು
Team Udayavani, Apr 10, 2019, 6:30 AM IST
ಮುಂಬಯಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದೆ. ಒಟ್ಟಾರೆ 200 ಆಟಗಾರರ ಮೇಲೆ ಫ್ರಾಂಚೈಸಿಗಳು ಒಟ್ಟು 50 ಕೋಟಿ ರೂ. ವಿನಿಯೋಗಿಸಿದ್ದಾರೆ.
ದ್ವಿತೀಯ ದಿನ ಹರಾಜಿನ “ಬಿ’ ವಿಭಾಗದಲ್ಲಿ ಡಿಫೆಂಡರ್ ಮಹೀಂದರ್ ಸಿಂಗ್ ಬೆಂಗಳೂರು ಬುಲ್ಸ್ ತಂಡಕ್ಕೆ 80 ಲಕ್ಷ ರೂ.ಗೆ ಮಾರಾಟವಾದರು. ರೈಡರ್ ಮಂಜಿತ್ 63 ಲಕ್ಷ ರೂ.ಗೆ ಪುನೇರಿ ಪಲ್ಟಾನ್ ಪಾಲಾದರು. ಇದು 2ನೇ ದಿನದ ಹರಾಜಿನ ಪ್ರಮುಖ ಹೈಲೈಟ್ಸ್.
ಹರಾಜಿನಲ್ಲಿ ಒಟ್ಟು 173 ಸ್ವದೇಶಿ ಹಾಗೂ 27 ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಮಾರಾಟಗೊಂಡಿದ್ದಾರೆ ಎನ್ನುವುದು ವಿಶೇಷ.
ಯಾರು ಯಾವ ತಂಡಕ್ಕೆ?
ಎರಡನೇ ದಿನ “ಬಿ’ ಗುಂಪಿನಿಂದ ಪುನೇರಿ ಪಲ್ಟಾನ್ಗೆ ಮಂಜಿತ್ (63 ಲಕ್ಷ ರೂ.), ಬೆಂಗಾಲ್ ವಾರಿಯರ್ ಕೆ. ಪ್ರಪಂಜನ್ (55.5 ಲಕ್ಷ ರೂ.), ತಮಿಳ್ ತಲೈವಾಸ್ಗೆ ಮೋಹಿತ್ ಚಿಲ್ಲರ್ (45 ಲಕ್ಷ ರೂ.), ದಬಾಂಗ್ ಡೆಲ್ಲಿಗೆ ವಿಜಯ್ (41 ಲಕ್ಷ ರೂ.), ಹರ್ಯಾಣ ಸ್ಟೀಲರ್ಗೆ ಧರ್ಮರಾಜ್ ಚೆರಾÉಥನ್ (38.5 ಲಕ್ಷ ರೂ.) ಮಾರಾಟಗೊಂಡ ಆಟಗಾರರಾಗಿದ್ದಾರೆ.
ಡಿಫೆಂಡರ್ ವಿಭಾಗದಲ್ಲಿ ಬೆಂಗಳೂರು ಬುಲ್ಸ್ಗೆ ಮಹೀಂದರ್ ಸಿಂಗ್ (80 ಲಕ್ಷ ರೂ.), ಪಾಟ್ನಾ ಪೈರೇಟ್ಸ್ಗೆ ಸುರೇಂದ್ರ ನಾಡ (77 ಲಕ್ಷ ರೂ.), ಗುಜರಾತ್ ಫಾರ್ಚೂನ್ಜೈಂಟ್ಸ್ಗೆ ಪರ್ವೇಶ್ (75 ಲಕ್ಷ ರೂ.), ದಬಾಂಗ್ ಡೆಲ್ಲಿಗೆ ರವೀಂದ್ರ ಪಾಹಲ್ (61 ಲಕ್ಷ ರೂ.), ತೆಲುಗು ಟೈಟಾನ್ಸ್ಗೆ ವಿಶಾಲ್ ಭಾರಧ್ವಾಜ್ (60 ಲಕ್ಷ ರೂ.) ಮಾರಾಟಗೊಂಡ ಅಗ್ರ ತಾರೆಯರಾಗಿದ್ದಾರೆ.
ಮೊದಲ ದಿನದ ಹರಾಜಿನಲ್ಲಿ ಸಿದ್ಧಾರ್ಥ್ ದೇಸಾಯಿ 1.45 ಕೋಟಿ ರೂ.ಗೆ ತೆಲುಗು ಟೈಟಾನ್ಸ್ಗೆ ಮಾರಾಟವಾಗಿ 2ನೇ ಗರಿಷ್ಠ ವೈಯಕ್ತಿಕ ಮೊತ್ತಕ್ಕೆ ಮಾರಾಟಗೊಂಡ ದಾಖಲೆ ನಿರ್ಮಿಸಿದ್ದರು. ನಿತಿನ್ ತೋಮರ್ ಪುನೇರಿ ಪಲ್ಟಾನ್ಗೆ 1.20 ಕೋಟಿ ರೂ.ಗೆ ಮಾರಾಟವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ