ಸ್ಟೀಲರ್ ಪಂಚ್‌ಗೆ ತತ್ತರಿಸಿದ ಯುಪಿ

Team Udayavani, Aug 15, 2019, 5:59 AM IST

ಅಹ್ಮದಾಬಾದ್‌: ಬೆಂಗಳೂರು ಬುಲ್ಸ್‌ ವಿರುದ್ಧ ಭರ್ಜರಿ ಗೆಲುವು ಗಳಿಸಿ ಲಯ ಕಂಡಿಕೊಂಡಿದ್ದ ಯುಪಿ ಯೋಧಾ ತಂಡ ಹರ್ಯಾಣ ಸ್ಟೀಲರ್ ವಿರುದ್ಧದ ಪಂದ್ಯದಲ್ಲಿ 36-33 ಅಂತರದ ಸೋಲನುಭವಿಸಿದೆ.

ಪ್ರೊ ಕಬಡ್ಡಿ ಏಳನೇ ಆವೃತ್ತಿ ಅಹ್ಮದಾಬಾದ್‌ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ವಿಕಾಸ್‌ ಕಾಂಡೋಲ ಪ್ರಚಂಡ ರೈಡಿಂಗ್‌ ಹಾಗೂ ಸುನೀಲ್‌ ಆಕರ್ಷಕ ಟ್ಯಾಕಲ್‌ ನಡೆಸುವ ಮೂಲಕ ಹರ್ಯಾಣಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ವಿಕಾಸ್‌ ರೈಡಿಂಗ್‌ನಲ್ಲಿ ಅಬ್ಬರಿಸಿ ಒಟ್ಟು 12 ಅಂಕ ಗಳಿಸಿದರೆ, ಸುನೀಲ್‌ ಟ್ಯಾಕಲ್‌ನಿಂದ 6 ಅಂಕ ಗಳಿಸಿ ತಂಡದ ಗೆಲುವಿನ ರೂವಾರಿಗಳಾದರು. ಉಳಿದಂತೆ ಕರ್ನಾಟಕದ ಅನುಭವಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ (3 ಅಂಕ) ತಂಡವನ್ನು ಆಧರಿಸಿದರು. ಆದರೆ ಹರ್ಯಾಣದ ಅನುಭವಿ ಆಟಗಾರ ಧರ್ಮರಾಜ್‌ ಚೆರಾÉಥನ್‌ ಕಳಪೆ ಆಟ ಮತ್ತೆ ಮುಂದುವರಿಸಿ ನಿರಾಸೆ ಮೂಡಿಸಿದರು.

ಯುಪಿ ಯೋಧಾ ಸೋಲಿನ ಸರಣಿ ಮುಂದುವರಿದಿದೆ. ಶ್ರೀಕಾಂತ್‌ ಜಾಧವ್‌ (9 ಅಂಕ), ಮೋನು ಗೋಯತ್‌ (5 ಅಂಕ), ಸುಮಿತ್‌ (4 ಅಂಕ) ಮಿಂಚಿದರೂ ತಂಡದ ಸೋಲು ತಪ್ಪಲಿಲ್ಲ. ಇದು 8 ಪಂದ್ಯಗಳಲ್ಲಿ ಯೋಧಾ ಅನುಭವಿಸಿದ 4ನೇ ಸೋಲು.

ಗುಜರಾತ್‌ಗೆ ಮತ್ತೆ ಸೋಲು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಮತ್ತೂಂದು ಸೋಲನುಭವಿಸಿತು. ಬೆಂಗಾಲ್‌ ವಾರಿ ಯರ್ ಈ ಮುಖಾಮುಖೀಯನ್ನು 28-26 ಅಂತರದಿಂದ ತನ್ನದಾಗಿಸಿ ಕೊಂಡಿತು. ಇದರೊಂದಿಗೆ ಗುಜರಾತ್‌ ಮನೆಯಂಗಳದಲ್ಲಿ ಹ್ಯಾಟ್ರಿಕ್‌ ಸೋಲಿನ ಅವಮಾನಕ್ಕೆ ಸಿಲುಕಿತು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪದ್ಮಭೂಷಣ ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪ್ರಥಮ...

  • ಬೆಂಗಳೂರು: ಪಾಲಿಕೆಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಕೊನೆಗೂ ಶನಿವಾರ ನಡೆಯಿತು. ಸ್ಥಾನ ವಂಚಿತ ಕೆಲವು ಸದಸ್ಯರ ಅಸಮಾಧಾನ, ಆಕ್ರೋಶ, ಕಣ್ಣೀರಿನ ನಡುವೆಯೇ ಎಲ್ಲ...

  • ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ಮಳೆನೀರು ಕಾಲುವೆಗೆ ಶೌಚಾಲಯ ಸೇರಿ ಮನೆಯ ತ್ಯಾಜ್ಯ ನೀರು ಹರಿಯಬಿಟ್ಟಿದ್ದೀರಾ? ಹಾಗಾದರೆ ನಿಮ್ಮ ಮನೆ ವಿದ್ಯುತ್‌...

  • ಬೆಂಗಳೂರು: ಭಾರತೀಯ ಸಂಸ್ಕೃತಿಯ ಬಾವುಟವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ...

  • ಬೆಂಗಳೂರು: "ನಾಟಕ ಕಂಪನಿ ನಡೆಸಲು ಸಾಲ ಕೊಟ್ಟವರು ಹಾರ್ಮೋನಿಯಂ ತೆಗೆದುಕೊಂಡು ಹೋಗುವಾಗ ತಾಯಿಯೊಬ್ಬರು ತನ್ನ ತಾಳಿ ಕೊಟ್ಟು ಸಾಲ ತೀರಿಸಿದ್ದರಿಂದಲೇ ಇಂದು...