ಪ್ರೊ ಕಬಡ್ಡಿ: ಬೆಂಗಾಲ್‌ ಗೆಲುವಿನ ಶುಭಾರಂಭ

Team Udayavani, Jul 24, 2019, 10:43 PM IST

ಹೈದರಾಬಾದ್‌: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ 7ನೇ ಆವೃತ್ತಿಯ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಬೆಂಗಾಲ್‌ ವಾರಿಯರ್ 48-17 ಅಂಕಗಳಿಂದ ಮಣಿಸಿ ಪ್ರಚಂಡ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಆರಂಭದಿಂದಲೇ ಯುಪಿ ಯೋಧಾ ಮೇಲೆ ಬೆಂಗಾಲ್‌ ಸವಾರಿ ಮಾಡಲು ಆರಂಭಿಸಿತು. ಅದರಲ್ಲೂ ರೈಡರ್‌ಗಳಾದ ಮೊಹಮ್ಮದ್‌ ನಬಿಭಕ್‌Ò, ಮಣಿಂದರ್‌ ಸಿಂಗ್‌ ಮತ್ತು ಕೆ. ಪ್ರಪಂಜನ್‌ ಶ್ರೇಷ್ಠ ದಾಳಿ ಸಂಘಟಿಸುವ ಮೂಲಕ ಯೋಧಾಕ್ಕೆ ಆರಂಭದಲ್ಲೇ ನಡುಕ ಹುಟ್ಟಿಸಿದರು.

ಯುಪಿ ಯೋಧಾ ತಂಡದ ತಾರಾ ಆಟಗಾರರ್ಯಾರೂ ದಿಟ್ಟ ಪ್ರದರ್ಶನ ನೀಡಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ