ಸಿದ್ಧಾರ್ಥ್ ಸುಂಟರಗಾಳಿಗೆ ಬೆಚ್ಚಿದ ಡೆಲ್ಲಿ

Team Udayavani, Dec 12, 2018, 6:00 AM IST

ವಿಶಾಖಪಟ್ಟಣ: ಸಿದ್ಧಾರ್ಥ್ ದೇಸಾಯಿ ಅವರ ಸುಂಟರಗಾಳಿಯಂಥ ರೈಡಿಂಗ್‌ (12 ಅಂಕ) ಹಾಗೂ ರೋಹಿತ್‌ ಬಲಿಯಾನ್‌ ಅವರ ಆಲ್‌ರೌಂಡ್‌ ಆಟದಿಂದಾಗಿ (8 ಅಂಕ) ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಯು ಮುಂಬಾ ಮತ್ತೆ ಅಬ್ಬರಿಸಿದೆ. ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯವನ್ನು 44-19 ಅಂಕಗಳ ಅಂತರದಿಂದ ಭರ್ಜರಿಯಾಗಿ ಗೆದ್ದು ಬೀಗಿದೆ.

ಸಿದ್ಧಾರ್ಥ್ ದೇಸಾಯಿ ಹಾಗೂ ರೋಹಿತ್‌ ಬಲಿಯಾನ್‌ ಸೇರಿಕೊಂಡು ಡೆಲ್ಲಿ ಕೋಟೆಯನ್ನು ನುಚ್ಚುನೂರು ಮಾಡಿದರು. ಇವರಿಗೆ ತಂಡದ ಸ್ಟಾರ್‌ ಆಟಗಾರ ಫ‌ಜಲ್‌ ಅತ್ರಾಚಲಿ (5 ಅಂಕ) ಹಾಗೂ ಸುರೇಂದ್ರ ಸಿಂಗ್‌ (5 ಅಂಕ) ಪ್ರಚಂಡ ಟ್ಯಾಕಲ್‌ ಮೂಲಕ ಸಾಥ್‌ ನೀಡಿದರು. ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡ 20-27 ಅಂತರದಿಂದ ಯುಪಿ ಯೋಧಕ್ಕೆ ಶರಣಾಯಿತು.

ಇಂದಿನ ಪಂದ್ಯಗಳು
1. ಹರ್ಯಾಣ-ಗುಜರಾತ್‌
ಸ್ಥಳ: ವಿಶಾಖಪಟ್ಟಣ
ಆರಂಭ: ರಾತ್ರಿ 8.00
2. ತೆಲುಗು-ಬುಲ್ಸ್‌
ಸ್ಥಳ: ವಿಶಾಖಪಟ್ಟಣ
ಆರಂಭ: ರಾತ್ರಿ 9.00

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ