ಮುಂಬಾ ಪ್ಲೇ-ಆಫ್ ಆಸೆ ಜೀವಂತ

ಪುನೇರಿ ಪಲ್ಟಾನ್‌ -ತಮಿಳ್‌ ತಲೈವಾಸ್‌ ಪಂದ್ಯ 36-36 ಟೈ

Team Udayavani, Sep 18, 2019, 11:23 PM IST

ಪುಣೆ: ಪ್ರೊ ಕಬಡ್ಡಿ 7ನೇ ಆವೃತ್ತಿಯ ಪ್ಲೇ-ಆಫ್ ಗೆ ಏರುವ ಕನಸನ್ನು ಯು ಮುಂಬಾ ಜೀವಂತವಾಗಿರಿಸಿಕೊಂಡಿದೆ. ಬುಧವಾರ ಪುಣೆ ಚರಣದ ಯುಪಿ ಯೋಧಾ ವಿರುದ್ಧದ ಪಂದ್ಯದಲ್ಲಿ ಯು ಮುಂಬಾ 39-36 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಅಭಿಷೇಕ್‌ ಸಿಂಗ್‌ (11 ರೈಡಿಂಗ್‌ ಅಂಕ), ಅರ್ಜುನ್‌ ದೆಸ್ವಾಲ್‌ (7 ರೈಡಿಂಗ್‌ ಅಂಕ) ಹಾಗೂ ಸುರೀಂದರ್‌ ಸಿಂಗ್‌ (6 ಟ್ಯಾಕಲ್‌ ಅಂಕ) ನೆರವಿನಿಂದ ಯು ಮುಂಬಾ ಗೆಲುವು ಗಳಿಸಿತು. ಯು ಮುಂಬಾ ಈ ಕೂಟದಲ್ಲಿ ಸಾಧಿಸಿದ 8ನೇ ಜಯ ಇದಾಗಿದೆ.

ಯೋಧಾಗೆ ಹಿನ್ನಡೆ
ಸೋಲಿನಿಂದಾಗಿ ಯುಪಿ ಯೋಧಾ ತಂಡದ ಪ್ಲೇ-ಆಫ್ ಹಾದಿಯಲ್ಲಿ ಅಲ್ಪ ಹಿನ್ನಡೆಯಾದಂತಾಗಿದೆ. ಯುಪಿ ಪರ ರಿಷಾಂಕ್‌ ದೇವಾಡಿಗ (9 ರೈಡಿಂಗ್‌ ಅಂಕ), ಶ್ರೀಕಾಂತ್‌ ಜಾಧವ್‌ (8 ರೈಡಿಂಗ್‌ ಅಂಕ) ಉತ್ತಮ ಪ್ರಯತ್ನ ನಡೆಸಿದರು. ರಕ್ಷಣಾ ವಿಭಾಗದಲ್ಲಿ ಆಶು ಸಿಂಗ್‌ ( 4 ಟ್ಯಾಕಲ್‌ ಅಂಕ) ಸ್ವಲ್ಪ ಮಿಂಚಿದರು. ಸದ್ಯ ಮುಂಬಾ-ಯೋಧಾ ತಲಾ 48 ಅಂಕಗಳೊಂದಿಗೆ 5-6ನೇ ಸ್ಥಾನದಲ್ಲಿವೆ. ಜೈಪುರ್‌ ಪಿಂಕ್‌ ಪ್ಯಾಂಥರ್ ಮೇಲೇರಿ ಬಂದರೆ ಪ್ಲೇ-ಆಫ್ ಹಾದಿಯ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ.

ರೋಚಕ ಹಣಾಹಣಿ
ಆತಿಥೇಯ ಪುನೇರಿ ಪಲ್ಟಾನ್‌ ಮತ್ತು ತಮಿಳ್‌ ತಲೈವಾಸ್‌ ನಡುವೆ ನಡೆದ ದಿನದ ದ್ವಿತೀಯ ಪಂದ್ಯ 36-36 ಅಂಕಗಳಿಂದ ರೋಚಕ ಟೈಯಲ್ಲಿ ಅಂತ್ಯ ಕಂಡಿತು.
ಅಂಕಪಟ್ಟಿಯಲ್ಲಿ ತಮಿಳ್‌ ತಲೈವಾಸ್‌ ಕೊನೆಯ ಸ್ಥಾನದಲ್ಲಿದ್ದು, ಕೂಟದಿಂದ ಬಹುತೇಕ ನಿರ್ಗಮಿಸಿದೆ. ಪುನೇರಿ ಪಲ್ಟಾನ್‌ ಕೂಡ ಅಗ್ರ ಆರರಲ್ಲಿ ಸ್ಥಾನ ಸಂಪಾದಿಸುವ ಸ್ಥಿತಿಯಲ್ಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ