ಪಂಜಾಬ್: ಮ್ಯಾಚ್ ಫಿಕ್ಸರ್ ದಂಡಿವಾಲ್ ಬಂಧನ
Team Udayavani, Jul 7, 2020, 4:57 AM IST
ಸಾಂದರ್ಭಿಕ ಚಿತ್ರ..
ಚಂಡೀಗಢ: ಸೋಮವಾರದ ಕಾರ್ಯಾಚರಣೆಯಲ್ಲಿ ಪಂಜಾಬ್ ಪೊಲೀಸರು ಮ್ಯಾಚ್ ಫಿಕ್ಸರ್ ರವೀಂದರ್ ದಂಡಿವಾಲ್ನನ್ನು ಬಂಧಿಸಿದ್ದಾರೆ.
ಕಳೆದ ತಿಂಗಳು ಮೊಹಾಲಿ ಜಿಲ್ಲೆಯಲ್ಲಿ ನಡೆದ ಟಿ20 ಪಂದ್ಯವೊಂದನ್ನು ಶ್ರೀಲಂಕಾದಲ್ಲಿ ಆನ್ಲೈನ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಬಳಿಕ ಇದು ನಕಲಿ ಟಿ20 ಪಂದ್ಯ ಎಂದು ಸಾಬೀತಾಗಿತ್ತು.
ಇದರ ಹಿಂದೆ ಫಿಕ್ಸಿಂಗ್ ವಾಸನೆ ಬಡಿದ ಕಾರಣ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ, ಪೊಲೀಸರು ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಜಂಟಿ ಕಾರ್ಯಾಚರಣೆಗೆ ಇಳಿದಿದ್ದವು.
ಈ ಪಂದ್ಯಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಇಬ್ಬರನ್ನು ಬಂಧಿಸಲಾಗಿತ್ತು. ಆದರೆ ದಂಡಿವಾಲ್ ಈ ಪ್ರಕರಣದ ಕಿಂಗ್ಪಿನ್ ಆಗಿದ್ದಾನೆ ಎಂಬುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.