ಕಾಮನ್ವೆಲ್ತ್ 2022: ಬ್ಯಾಡ್ಮಿಂಟನ್ ಸ್ಪರ್ಧೆ; ಸಿಂಧು ಸೆಮಿಫೈನಲಿಗೆ
Team Udayavani, Aug 6, 2022, 11:32 PM IST
ಬರ್ಮಿಂಗ್‌ಹ್ಯಾಮ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮಲೇಶ್ಯದ ಗೋ ವೈ ಜಿನ್ ಅವರನ್ನು ಮೂರು ಗೇಮ್‌ಗಳ ಸೆಣಸಾಟದಲ್ಲಿ ಸೋಲಿಸಿ ಬ್ಯಾಡ್ಮಿಂಟನ್ ಸ್ಪರ್ಧೆಯ ಸೆಮಿಫೈನಲ್ ಹಂತಕ್ಕೇರಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಸಿಂಧು 19-21, 21-14, 21-18 ಗೇಮ್‌ಗಳಿಂದ ಜಯ ಸಾಧಿಸಿ ವೈಯಕ್ತಿಕವಾಗಿ ಚೊಚ್ಚಲ ಚಿನ್ನ ಗೆಲ್ಲುವ ಸಾಧ್ಯತೆಯನ್ನು ಜೀವಂತವಿರಿಸಿಕೊಂಡರು. ಅವರು ಈ ಹಿಂದಿನ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಸಿಂಧು ಸತತ ಮೂರನೇ ಬಾರಿ ಗೇಮ್ಸ್‌ನ ಸೆಮಿಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ.
ಗೇಮ್ಸ್‌ಗೆ ಪದಾರ್ಪಣೆಗೈದ ಯುವ ತಾರೆ ಆಕರ್ಷಿ ಕಶ್ಯಪ್ ಅವರ ಹೋರಾಟ ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಅವರು ಸ್ಕಾಟ್ಲೆಂಡಿನ ಕ್ರಿಸ್ಟಿ ಗಿಲ್ಮೋರ್ ಕೈಯಲ್ಲಿ 10-21, 7-21 ಗೇಮ್‌ಗಳಿಂದ ಶರಣಾದರು. ಗಿಲ್ಮೋರ್ 2014 ಮತ್ತು 2018ರ ಗೇಮ್ಸ್‌ನಲ್ಲಿ ಅನುಕ್ರಮವಾಗಿ ಬೆಳ್ಳಿ, ಕಂಚು ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ
ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್
ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್
ಫಿಡೆ ಉಪಾಧ್ಯಕ್ಷರಾಗಿ ವಿಶ್ವನಾಥನ್ ಆನಂದ್ ನೇಮಕ