ಪ್ರಶಸ್ತಿ ಸುತ್ತಿಗೆ ನೆಗೆದ ಪಿ.ವಿ. ಸಿಂಧು

Team Udayavani, Jul 21, 2019, 5:13 AM IST

ಜಕಾರ್ತಾ: ಆಲ್ ಇಂಗ್ಲೆಂಡ್‌ ಚಾಂಪಿಯನ್‌ ಖ್ಯಾತಿಯ ಚೀನದ ಚೆನ್‌ ಯುಫೀ ವಿರುದ್ಧ ಚೆಂದದ ಆಟವಾಡಿದ ಪಿ.ವಿ. ಸಿಂಧು ‘ಇಂಡೋನೇಶ್ಯ ಓಪನ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಇದು ಪ್ರಸಕ್ತ ಋತುವಿನಲ್ಲಿ ಸಿಂಧು ಕಾಣುತ್ತಿರುವ ಮೊದಲ ಫೈನಲ್ ಹಣಾಹಣಿಯಾಗಿದೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ವಿಶ್ವದ 3ನೇ ರ್‍ಯಾಂಕಿಂಗ್‌ ಆಟಗಾರ್ತಿ ಚೆನ್‌ ಯುಫೀ ವಿರುದ್ಧ 21-19, 21-10 ನೇರ ಗೇಮ್‌ಗಳಿಂದ ಗೆದ್ದು ಬಂದರು. ರವಿವಾರದ ಫೈನಲ್ನಲ್ಲಿ ಸಿಂಧು ಜಪಾನಿನ 4ನೇ ಶ್ರೇಯಾಂಕಿತೆ ಅಕಾನೆ ಯಮಾಗುಚಿ ವಿರುದ್ಧ ಸೆಣಸಲಿದ್ದಾರೆ. ಯಮಾಗುಚಿ ವಿರುದ್ಧ ಸಿಂಧು 10-4 ಗೆಲುವಿನ ದಾಖಲೆ ಹೊಂದಿದ್ದಾರಷ್ಟೇ ಅಲ್ಲ, ಕಳೆದ 4 ಪಂದ್ಯಗಳನ್ನು ಗೆದ್ದು ಸಂಭ್ರಮಿಸಿದ್ದಾರೆ. ಹೀಗಾಗಿ ಸಿಂಧು ಅವರನ್ನೇ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಲಾಗಿದೆ.

ಈ ಋತುವಿನ ಸಿಂಗಾಪುರ್‌ ಓಪನ್‌ ಮತ್ತು ಇಂಡಿಯಾ ಓಪನ್‌ ಕೂಟಗಳಲ್ಲಿ ಸಿಂಧು ಸೆಮಿಫೈನಲ್ ಗಡಿ ದಾಟಿರಲಿಲ್ಲ.

ಮೊದಲ ಗೇಮ್‌ನ ತೀವ್ರತೆ
ಆಲ್ ಇಂಗ್ಲೆಂಡ್‌ ಮಾತ್ರವಲ್ಲದೆ, ಈ ವರ್ಷದ ಆಸ್ಟ್ರೇಲಿಯ ಮತ್ತು ಸ್ವಿಸ್‌ ಓಪನ್‌ ಕೂಟಗಳಲ್ಲೂ ಚೆನ್‌ ಯುಫೀ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಹೀಗಾಗಿ ತೀವ್ರ ಪೈಪೋಟಿ ಯನ್ನು ನಿರೀಕ್ಷಿಸಲಾಗಿತ್ತು. ಮೊದಲ ಗೇಮ್‌ನಲ್ಲೇ ಸಿಂಧುಗೆ ಇದರ ಅನು ಭವವಾಯಿತು. 18-18, 19-19ರಲ್ಲಿ ಪಂದ್ಯ ಸಮಬಲಗೊಂಡಾಗ ಇಲ್ಲಿ ಯಾರೂ ಗೆಲ್ಲುವ ಸಾಧ್ಯತೆ ಇತ್ತು. ಈ ಅದೃಷ್ಟ ಭಾರತೀಯಳದ್ದಾಯಿತು.

ಎರಡನೇ ಗೇಮ್‌: ಸುಲಭ ಜಯ
ಎರಡನೇ ಗೇಮ್‌ನಲ್ಲಿ ಸಿಂಧು ಸುಲಭ ಜಯ ಒಲಿಸಿಕೊಂಡರೂ ಆರಂಭದಲ್ಲಿ ಯುಫೀ 4-0 ಮುನ್ನಡೆಯಲ್ಲಿದ್ದರು. ಆದರೆ ಇಲ್ಲಿಂದ ಮುಂದೆ ಚೀನೀ ಆಟಗಾರ್ತಿ ಮಂಕಾಗುತ್ತ ಹೋದರು. ಸಿಂಧು ಮುನ್ನಡೆ ದ್ವಿಗುಣಗೊಂಡಿತು (16-8). ಯುಫೀ ಅಂಕ ಹತ್ತರ ಗಡಿ ದಾಟಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ