ವಿಶ್ವ  ಬ್ಯಾಡ್ಮಿಂಟನ್‌ ಪಂದ್ಯಾವಳಿ: ಸಿಂಧು ಸೆಮಿಗೆ; ಪದಕ ಖಾತ್ರಿ


Team Udayavani, Aug 4, 2018, 6:00 AM IST

c-16.jpg

ನಾಂಜಿಂಗ್‌ (ಚೀನ): ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಪದಕವೊಂದನ್ನು ಖಚಿತಪಡಿಸಿದ್ದಾರೆ. ಭಾರತದ ಪಾಲಿಗೆ ಸೋಲಿನ ದಿನವಾಗಿದ್ದ ಶುಕ್ರವಾರದ ಕೊನೆಯಲ್ಲಿ ಈ ಕಂಟಕವನ್ನು ನಿವಾರಿಸಿದ ಸಿಂಧು ವನಿತಾ ಸಿಂಗಲ್ಸ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಇದರಿಂದ ಕನಿಷ್ಠ ಕಂಚಿನ ಪದಕವೊಂದು ಈ ಆಟಗಾರ್ತಿಯ ಕೊರಳನ್ನು ಅಲಂಕರಿಸಲಿದೆ.

ಶುಕ್ರವಾರದ ಪಂದ್ಯಗಳಲ್ಲಿ ಸೈನಾ ನೆಹ್ವಾಲ್‌, ಅಶ್ವಿ‌ನಿ ಪೊನ್ನಪ್ಪ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ, ಬಿ. ಸಾಯಿ ಪ್ರಣೀತ್‌… ಇವರೆಲ್ಲ ಸೋತು ಭಾರತದ ಪಾಳೆಯದಲ್ಲಿ ಹತಾಶ ವಾತಾವರಣ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಆಶಾಕಿರಣವಾಗಿ ಮೂಡಿಬಂದ ಸಿಂಧು ಜಪಾನಿನ ನಜೋಮಿ ಒಕುಹರಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿ 21-17, 21-19 ಅಂತರದ ರೋಮಾಂಚಕ ಗೆಲುವನ್ನು ಒಲಿಸಿಕೊಂಡರು. ಎರಡೂ ಗೇಮ್‌ಗಳಲ್ಲಿ ಆರಂಭಿಕ ಹಿನ್ನಡೆ ಕಂಡರೂ ಎದೆಗುಂದದೆ ಆಡಿ ಸೆಮಿಫೈನಲ್‌ಗೆ ಮುನ್ನುಗ್ಗುವಲ್ಲಿ ಯಶಸ್ವಿಯಾದರು.

ಪಿ.ವಿ. ಸಿಂಧು ಈವರೆಗೆ 2013, 2014ರಲ್ಲಿ ಕಂಚಿನ ಪದಕ, 2017ರಲ್ಲಿ ಬೆಳ್ಳಿ ಪದಕ ಗೆದ್ದು ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಶನಿವಾರದ ಸೆಮಿಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ ಆಡಲಿದ್ದಾರೆ.

ಸೈನಾ, ಅಶ್ವಿ‌ನಿ-ಸಾತ್ವಿಕ್‌ ನಿರ್ಗಮನ
ಶುಕ್ರವಾರ ಬೆಳಗ್ಗೆ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೈನಾ ನೆಹ್ವಾಲ್‌ 2 ಬಾರಿಯ ಚಾಂಪಿಯನ್‌ ಕ್ಯಾರೋಲಿನಾ ಮರಿನ್‌ಗೆ ಶರಣಾಗಿ ಹೊರಬಿದ್ದರು. ರಿಯೋ ಒಲಿಂಪಿಕ್‌ ಚಾಂಪಿಯನ್‌ ಕೂಟ ಆಗಿರುವ ಸ್ಪೇನಿನ ಮರಿನ್‌ 21-6, 21-11 ಅಂತರದಿಂದ ಸೈನಾಗೆ ಸೋಲುಣಿಸಿದರು. 

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನ್‌ ಪೊನ್ನಪ್ಪ-ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಆಟ ಕೂಡ ಕ್ವಾರ್ಟರ್‌ ಫೈನಲ್‌ನಲ್ಲೇ ಕೊನೆಗೊಂಡಿತು. ಚೀನೀ ಜೋಡಿಯಾದ ಜೆಂಗ್‌ ಸಿವೀ-ಹ್ವಾಂಗ್‌ ಯಾಕಿಯೋಂಗ್‌ 21-17, 21-10 ನೇರ ಗೇಮ್‌ಗಳಲ್ಲಿ ಭಾರತೀ‌ಯರನ್ನು ಹಿಮ್ಮೆಟ್ಟಿಸಿತು. 

 ಸಾಯಿ ಪ್ರಣಿತ್‌ಗೆ ಸೋಲು
ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಕೂಡ ಸೋಲನುಭವಿಸಿದರು. ಜಪಾನಿನ ಕೆಂಟೊ ಮೊಮೊಟ ವಿರುದ್ಧ ನಡೆದ ಪಂದ್ಯವನ್ನು ಪ್ರಣೀತ್‌ 21-21, 21-21ರಿಂದ ಕಳೆದುಕೊಂಡರು.

ಟಾಪ್ ನ್ಯೂಸ್

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

ಪಾಕ್‌ ಪಿಎಂ ಇಮ್ರಾನ್‌ಗೆ ಡಬಲ್‌ ಪ್ರಾಬ್ಲೆಮ್‌; ವಿದೇಶಿ ದೇಣಿಗೆ ವಿವರ ಬಹಿರಂಗಕ್ಕೆ ಆದೇಶ

ಪಾಕ್‌ ಪಿಎಂ ಇಮ್ರಾನ್‌ಗೆ ಮತ್ತೆರಡು ಹೊಸ ಸವಾಲುಗಳು

ಬೆಂಗಳೂರು ಏರ್‌ಪೋರ್ಟಲ್ಲಿ ತಪ್ಪಿದ ಮಹಾ ದುರಂತ !

ಬೆಂಗಳೂರು ಏರ್‌ಪೋರ್ಟಲ್ಲಿ ತಪ್ಪಿದ ಮಹಾ ದುರಂತ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಲ್ಲಿ ಆಡಿದ್ದ ಹುಡುಗ ಈಗ ಭಾರತದ ಕ್ರಿಕೆಟ್‌ ಕ್ಯಾಪ್ಟನ್‌

ಮಂಗಳೂರಲ್ಲಿ ಆಡಿದ್ದ ಹುಡುಗ ಈಗ ಭಾರತದ ಕ್ರಿಕೆಟ್‌ ಕ್ಯಾಪ್ಟನ್‌

ಆಸ್ಟ್ರೇಲಿಯನ್‌ ಓಪನ್‌: ಮೂರನೇ ಸುತ್ತಿಗೆ ಒಸಾಕಾ, ನಡಾಲ್‌

ಆಸ್ಟ್ರೇಲಿಯನ್‌ ಓಪನ್‌: ಮೂರನೇ ಸುತ್ತಿಗೆ ಒಸಾಕಾ, ನಡಾಲ್‌

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.