ಕತಾರ್ ಓಪನ್ ಟೆನಿಸ್: ಸೆಮಿಫೈನಲ್ಗೆ ಜೊಕೋವಿಕ್
Team Udayavani, Jan 5, 2019, 12:30 AM IST
ದೋಹಾ: ವಿಶ್ವದ ನಂ. ವನ್ ಟೆನಿಸಿಗ ನೊವಾಕ್ ಜೊಕೋವಿಕ್ “ಕತಾರ್ ಓಪನ್’ ಕೂಟದಲ್ಲಿ ಅಜೇಯ ಓಟವನ್ನು ಮುಂದುರಿಸಿದ್ದು, ಸೆಮಿಫೈನಲ್ಗೆ ಕಾಲಿರಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ಜಾರ್ಜಿಯಾದ ನಿಕೋಲಸ್ ಬಸಿಲಶ್ವಿಲಿ ವಿರುದ್ಧ 4-6, 6-3, 6-4 ಸೆಟ್ಗಳಿಂದ ಜಯ ದಾಖಲಿಸಿದರು. ಸೆಮಿಫೈನಲ್ನಲ್ಲಿ ಜೊಕೋವಿಕ್ ಸ್ಪೇನ್ ರಾಬರ್ಟೊ ಬಟಿಸ್ಟಾ ಅಗುಟ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 3 ಬಾರಿಯ ಗ್ರ್ಯಾನ್ಸ್ಲಾಮ್ ವಿಜೇತ ಸ್ಟಾನ್ ವಾವ್ರಿಂಕ ಅವರನ್ನು ಅಗುಟ್ 6-4, 6-4 ನೇರ ಸೆಟ್ಗಳಿಂದ ಸೋಲಿಸಿದರು.
ಡಬಲ್ಸ್ನಲ್ಲಿ ಸೋಲು
ಕೂಟದ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ನೊವಾಕ್ ಜೊಕೋವಿಕ್-ಮಾರ್ಕೊ ಜೊಕೋವಿಕ್ ಜೋಡಿ ಪಿಯರೆ ಹ್ಯೂಸ್ ಹರ್ಬರ್ಟ್-ಡೇವಿಡ್ ಗೊಫಿನ್ ವಿರುದ್ಧ 1-6, 6-3, 13-15 ಸೆಟ್ಗಳಿಂದ ಪರಾಭವಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು