ಅರ್ಹತಾ ಹಾಕಿ: ಪುರುಷರಿಗೆ ರಶ್ಯ ವಿರುದ್ಧ 4-2 ಗೆಲುವು
Team Udayavani, Nov 1, 2019, 11:56 PM IST
ಭುವನೇಶ್ವರ: ಟೋಕಿಯೊ ವಿಮಾನವೇರುವ ಕನಸಿನಲ್ಲಿರುವ ಭಾರತದ ಪುರುಷರಿಗೂ ಶುಕ್ರವಾರ ಅರ್ಹ ಗೆಲುವು ಒಲಿದಿದೆ. ರಾತ್ರಿ ನಡೆದ ರಶ್ಯ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 4-2 ಗೋಲುಗಳಿಂದ ಗೆದ್ದು ಬಂದಿದೆ. ಒಲಿಂಪಿಕ್ ಅರ್ಹತಾ ಸುತ್ತಿನ ಇನ್ನೊಂದು ಪಂದ್ಯ ಶನಿವಾರ ನಡೆಯಲಿದೆ.
5ನೇ ನಿಮಿಷದಲ್ಲೇ ಹರ್ಮನ್ಪ್ರೀತ್ ಸಿಂಗ್ ಭಾರತಕ್ಕೆ ಮೇಲುಗೈ ಒದಗಿಸಿದರು. 17ನೇ ನಿಮಿಷದಲ್ಲಿ ಆ್ಯಂಡ್ರೆ ಕುರೇವ್ ಪಂದ್ಯವನ್ನು ಸಮಬಲಕ್ಕೆ ತಂದರು. ಬಳಿಕ 24ನೇ ನಿಮಿಷದಲ್ಲಿ ಮನದೀಪ್ ಸಿಂಗ್ ಗೋಲಿನ ಮೂಲಕ ಭಾರತ ಮತ್ತೆ ಮುನ್ನಡೆ ಸಾಧಿಸಿತು. ವಿರಾಮದ ವೇಳೆ ಆತಿಥೇಯ ಪಡೆ 2-1 ಲೀಡ್ ಹೊಂದಿತ್ತು.
48ನೇ ನಿಮಿಷದಲ್ಲಿ ಎಸ್.ವಿ. ಸುನೀಲ್ ಈ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿದರು. ಐದೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ತಮ್ಮ ದ್ವಿತೀಯ ಗೋಲಿನ ಮೂಲಕ ಭಾರತದ ಗೆಲುವನ್ನು ಖಾತ್ರಿಗೊಳಿಸಿದರು. ಪಂದ್ಯ ಮುಗಿಯಲು ಇನ್ನೇನು 15 ಸೆಕೆಂಡ್ ಇರುವಾಗ ಸೆಮೆನ್ ಮ್ಯಾಟ್ಕೋವ್ಸ್ಕಿ 2ನೇ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ