ಮಂಡಿಯೂರಿದ ಡಿಕಾಕ್: ಕೊನೆಗೂ ತಂಡದಲ್ಲಿ ಸ್ಥಾನ ಪಡೆದ ಕ್ವಿಂಟನ್
Team Udayavani, Oct 30, 2021, 4:44 PM IST
ಶಾರ್ಜಾ: ವರ್ಣಭೇದ ನೀತಿಯ ವಿರುದ್ಧ ಪಂದ್ಯದ ವೇಳೆ ಮಂಡಿಯೂರಲು ನಿರಾಕರಿಸಿ ತಂಡದಿಂದ ಹೊರಗುಳುದಿದ್ದ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಇಂದು ಲಂಕಾ ವಿರುದ್ಧದ ಪಂದ್ಯದ ವೇಳೆ ಮಂಡಿಯೂರಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮಂಗಳವಾರದ ಪಂದ್ಯದ ಮೊದಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ಜನಾಂಗೀಯ ವಿರೋಧಿ ನಡೆಯಾದ ಮಂಡಿಯೂರುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಕ್ವಿಂಟನ್ ಡಿ ಕಾಕ್ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ವಿಂಡೀಸ್ ವಿರುದ್ದ ಅವರು ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ.
ಇದನ್ನೂ ಓದಿ:“ನಿನ್ನ ಜಾಗವನ್ನು ಯಾರೂ ತುಂಬಲಾರರು ಅಪ್ಪು” ಭಾವನಾತ್ಮಕ ಪತ್ರ ಬರೆದ ಕಿಚ್ಚ
ಪಂದ್ಯದ ಬಳಿಕ ಕ್ರಿಕೆಟ್ ಮಂಡಳಿಯ ಜೊತೆಗಿನ ಚರ್ಚೆಯ ನಂತರ ಕ್ವಿಂಟನ್ ಡಿ ಕಾಕ್ ಕ್ಷಮೆ ಕೇಳಿದ್ದರು. ಇಂದು ಲಂಕಾ ವಿರುದ್ಧ ಆಡುವ ಬಳಗದಲ್ಲಿ ಅವಕಾಶ ಪಡೆದ ಕ್ವಿಂಟನ್, ಪಂದ್ಯಾರಂಭಕ್ಕೂ ಮೊದಲು ಮಂಡಿಯೂರಿ ತನ್ನ ನಿಲುವು ಪ್ರದರ್ಶಿಸಿದರು.