ಅಂತಿಮ ಓವರ್ ನಲ್ಲಿ ರಬಾಡ ಹ್ಯಾಟ್ರಿಕ್ ಸಾಧನೆ: ಗೆದ್ದರೂ ಸೆಮಿ ತಲುಪದ ದ.ಆಫ್ರಿಕಾ
Team Udayavani, Nov 7, 2021, 8:45 AM IST
ಶಾರ್ಜಾ: ಬಲಿಷ್ಠ ಇಂಗ್ಲೆಂಡ್ ವಿರುದ್ಧ ರೋಚಕ ಅಂತಿಮ ಓವರ್ ನಲ್ಲಿ ಗೆದ್ದರೂ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ನಿಂದ ಹೊರಬಿದ್ದಿದೆ. ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ತಂಡ ಸೆಮಿ ಫೈನಲ್ ಪ್ರವೇಶ ಪಡೆದಿದೆ.
ವ್ಯಾನ್ ಡರ್ ಡ್ಯುಸನ್ ಮತ್ತು ಮಾಕ್ರಮ್ ಬ್ಯಾಟಿಂಗ್ ಪವರ್, ರಬಾಡಾ ಅದ್ಭುತ ಅಂತಿಮ ಓವರ್ ಮತ್ತು ಹ್ಯಾಟ್ರಿಕ್ ವಿಕೆಟ್ ಗಳ ಹರಿಣಗಳ ಗೆಲುವಿನ ಹೈಲೈಟ್ಸ್.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಎರಡೇ ವಿಕೆಟಿಗೆ 189 ರನ್ ಬಾರಿಸಿದರೆ, ಇಂಗ್ಲೆಂಡ್ 8 ವಿಕೆಟಿಗೆ 179 ರನ್ ಗಳಿಸಿ ಮೊದಲ ಸೋಲುಂಡಿತು.
ಇದನ್ನೂ ಓದಿ:
ದ. ಆಫ್ರಿಕಾ 131 ರನ್ನಿಗೆ ಇಂಗ್ಲೆಂಡನ್ನು ನಿಯಂತ್ರಿಸಿ ಗೆದ್ದರಷ್ಟೇ ನಾಕೌಟ್ ಪ್ರವೇಶಿಸುತ್ತಿತ್ತು. ದಿನದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಗೆದ್ದು ತನ್ನ ಅಂಕವನ್ನು 8ಕ್ಕೆ ಏರಿಸಿಕೊಂಡಿದ್ದರಿಂದ ಈ ಲೆಕ್ಕಾಚಾರ ಮಹತ್ವ ಪಡೆದಿತ್ತು. ರಸ್ಸಿ ವಾನ್ ಡರ್ ಡುಸೆನ್ ಅವರ ಪ್ರಚಂಡ ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ಸರದಿಯ ವಿಶೇಷವಾಗಿತ್ತು. ಅವರು 94 ರನ್ ಬಾರಿಸಿ ಅಜೇಯರಾಗಿ ಉಳಿದರು.
ರಬಾಡ ಹ್ಯಾಟ್ರಿಕ್: ತನ್ನ ಮೊದಲ ಮೂರು ಓವರ್ ಗಳಲ್ಲಿ ದುಬಾರಿಯಾಗಿದ್ದ ಕಗಿಸೋ ರಬಾಡ ಇನ್ನಿಂಗ್ಸ್ ನ ಅಂತಿಮ ಓವರ್ ಎಸೆದರು. ಆಗ ಇಂಗ್ಲೆಂಡ್ ಗೆ 14 ರನ್ ಅವಶ್ಯಕತೆಯಿತ್ತು. ಆದರೆ ಕಾಗಿಸೊ ರಬಾಡ ಅಂತಿಮ ಓವರ್‌ನ ಮೊದಲ 3 ಎಸೆತಗಳಲ್ಲಿ ಕ್ರಮವಾಗಿ ವೋಕ್ಸ್, ಮಾರ್ಗನ್ ಮತ್ತು ಜೋರ್ಡನ್ ವಿಕೆಟ್ ಉಡಾಯಿಸಿದರು. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ದಕ್ಷಿಣ ಆಫ್ರಿಕಾ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಪೂರ್ಣ ಯಾರ್ಕರ್ ಎಸೆಯಲು ನೆಟ್ ಅಭ್ಯಾಸ ಸಹಕಾರಿ: ಅರ್ಷದೀಪ್ ಸಿಂಗ್
ಬುಮ್ರಾ ಸತತ 7 ಐಪಿಎಲ್ ಋತುಗಳಲ್ಲಿ 15 ಪ್ಲಸ್ ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್
ಐಪಿಎಲ್ ಓಪನಿಂಗ್ ಮ್ಯಾಚ್: 2020: ಚಾಂಪಿಯನ್ ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ವನಿತಾ ಟಿ20 ಚಾಲೆಂಜರ್ ಸರಣಿ: ಸೂಪರ್ ನೋವಾಗೆ ಸೂಪರ್ ಗೆಲುವು
MUST WATCH
ಹೊಸ ಸೇರ್ಪಡೆ
ಉಕ್ರೇನ್ ಯುದ್ಧದಿಂದ ಹೊಸ ಪಾಠ: ಲೆ.ಜ.ಕಲಿತಾ
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ