ರಫೆಲ್ ನಡಾಲ್ ಮುನ್ನಡೆ

Team Udayavani, May 30, 2019, 6:02 AM IST

ಪ್ಯಾರಿಸ್‌: 12ನೇ ಫ್ರೆಂಚ್ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ 3ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು ಜರ್ಮನಿಯ ಅರ್ಹತಾ ಆಟಗಾರ, ವಿಶ್ವ ರ್‍ಯಾಂಕಿಂಗ್‌ನಲ್ಲಿ 114ನೇ ಸ್ಥಾನದಲ್ಲಿರುವ ಯಾನಿಕ್‌ ಮಡೆನ್‌ ವಿರುದ್ಧ 6-1, 6-2, 6-4 ಅಂತರದ ಸುಲಭ ಜಯ ಸಾಧಿಸಿದರು. ಈ ಜಯದೊಂದಿಗೆ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡಾಲ್ ಗೆಲುವಿನ ದಾಖಲೆ 88-2ಕ್ಕೆ ವಿಸ್ತರಿಸಲ್ಪಟ್ಟಿತು.

ರಫೆಲ್ ನಡಾಲ್ ಇನ್ನು ಬೆಲ್ಜಿಯಂನ 27ನೇ ಶ್ರೇಯಾಂಕಿತ ಆಟಗಾರ ಡೇವಿಡ್‌ ಗೊಫಿನ್‌ ವಿರುದ್ಧ ಆಡಲಿದ್ದಾರೆ.

‘ಮಡೆನ್‌ ಅತ್ಯುತ್ತಮ ಆಟಗಾರ. ಅವರು ಈಗಾಗಲೇ 4 ಪಂದ್ಯ ಗೆದ್ದು ಬಂದಿದ್ದಾರೆ. ತುಂಬು ಆತ್ಮವಿಶ್ವಾಸದಲ್ಲಿದ್ದರು’ ಎಂಬುದಾಗಿ ನಡಾಲ್ ಪ್ರತಿಕ್ರಿಯಿಸಿದರು.


ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ