ನಡಾಲ್ -ಫೆಡರರ್ ತಂಡಕ್ಕೆ ಲೇವರ್ ಕಪ್
Team Udayavani, Sep 26, 2017, 6:25 AM IST
ಪ್ರಾಗ್ (ಜೆಕ್ ಗಣರಾಜ್ಯ): ವಿಶ್ವ ಶ್ರೇಷ್ಠ ಟೆನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರನ್ನು ಹೊಂದಿರುವ ಯೂರೋಪ್ ತಂಡ ಲೇವರ್ ಕಪ್ನಲ್ಲಿ ಜಯ ಸಾಧಿಸಿದೆ.
ಮೂರು ದಿನಗಳ ಕಾಲ ನಡೆದ ಈ ಕೂಟದಲ್ಲಿ ದಿಗ್ಗಜ ಆಟಗಾರರನ್ನು ಹೊಂದಿರುವ ಯೂರೋಪ್ ತಂಡ ವಿಶ್ವ ತಂಡವನ್ನು ಮಣಿಸಿತು. ಈ ಕೂಟದಲ್ಲಿ ನಡಾಲ್ ಮತ್ತು ಫೆಡರರ್ ಜತೆಯಾಗಿ ಡಬಲ್ಸ್ ಆಡಿ ಜಯ ಸಾಧಿಸಿದ್ದರು. ಮೂರನೇ ದಿನ ನಡೆದ ಸಿಂಗಲ್ಸ್ನಲ್ಲಿ ಫೆಡರರ್ 4-6, 7-6(8-6), 11-9 ರಿಂದ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ ಗೆಲುವು ಪಡೆದಿದ್ದಾರೆ. ಆದರೆ ಮತ್ತೂಂದು ಸಿಂಗಲ್ಸ್ನಲ್ಲಿ ನಡಾಲ್ 5-7, 6-7(1-7) ರಿಂದ ಅಮೆರಿಕದ ಜಾನ್ ಇಸ್ನರ್ ವಿರುದ್ಧ ಸೋತಿದ್ದಾರೆ.