ಅಂಡರ್-19 ಬದಲು “ಎ’ ತಂಡದೊಂದಿಗೆ ದ್ರಾವಿಡ್ ಪ್ರವಾಸ
Team Udayavani, Jul 5, 2017, 10:00 AM IST
ಹೊಸದಿಲ್ಲಿ: ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ, “ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ “ಎ’ ಮತ್ತು ಭಾರತದ ಅಂಡರ್-19 ಕ್ರಿಕೆಟ್ ತಂಡದ ಕೋಚ್ ಆಗಿ ಮುಂದುವರಿದಿದ್ದರು. ಇದಕ್ಕಾಗಿ ಅವರು ಐಪಿಎಲ್ನ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಮೆಂಟರ್ ಹುದ್ದೆಯನ್ನೇ ತ್ಯಜಿಸಿದ್ದರು.
ಆದರೆ ಕೋಚ್ ಆಗಿ ದ್ರಾವಿಡ್ ಮುಂದುವರಿಕೆ ಖಚಿತವಾಗುತ್ತಿದ್ದಂತೆ ಅವರು ಸಣ್ಣ ಸಂದಿಗ್ಧದಲ್ಲಿ ಬಿದ್ದಿದ್ದಾರೆ. ಭಾರತ ಎ ತಂಡ ಮತ್ತು ಅಂಡರ್-19 ತಂಡಗಳ ಪ್ರವಾಸ ಒಂದೇ ಬಾರಿಗೆ ನಡೆಯಲಿದೆ. ಆದ್ದರಿಂದ ಯಾವ ತಂಡದೊಂದಿಗೆ ತೆರಳುವುದು ಎಂಬುದು ಅವರ ಗೊಂದಲಕ್ಕೆ ಕಾರಣ. ಕಡೆಗೂ ದ್ರಾವಿಡ್ “ಎ’ ತಂಡದೊಂದಿಗೆ ಪ್ರವಾಸ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಸದ್ಯದಲ್ಲಿಯೇ ಅಂಡರ್-19 ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಅದೇ ರೀತಿ “ಎ’ ತಂಡ 4 ದಿನಗಳ 2 ಪಂದ್ಯ, ಏಕದಿನ ತ್ರಿಕೋನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಈ ಎರಡರಲ್ಲಿ ದ್ರಾವಿಡ್ ಭಾರತ “ಎ’ ತಂಡದ ಜತೆ ಪ್ರವಾಸಕ್ಕೆ ಮುಂದಾಗಿದ್ದಾರೆ. ಅಂಡರ್-19 ತಂಡಕ್ಕೆ ತಾತ್ಕಾಲಿಕ ಕೋಚ್ ನೇಮಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ