ರಾಹುಲ್ ಆರಂಭಿಕನಾಗಿ ಆಡುವುದೇ ಸೂಕ್ತ: ಗಂಭೀರ್
Team Udayavani, Feb 6, 2020, 5:10 AM IST
ಹೊಸದಿಲ್ಲಿ: ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಯೋಚನೆ ಸರಿಯಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ರಾಹುಲ್ ಅವರನ್ನು ಕೀಪರ್ ಆಗಿ ತಂಡದಲ್ಲಿ ಬಳಸಿಕೊಂಡದ್ದು ಸರಿಯಾದ ನಿರ್ಧಾರ ಆದರೆ ರೋಹಿತ್ ಮತ್ತು ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ಅವರನ್ನು ಆರಂಭಿಕನಾಗಿ ಆಡಿಸಬೇಕಿತ್ತು. ಟಿ20ಯಲ್ಲಿ ಆರಂಭಿಕನಾಗಿ ಉತ್ತಮ ಫಾರ್ಮ್ ಕಂಡುಕೊಂಡ ರಾಹುಲ್ ಆವರನ್ನು ಏಕಾಏಕಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ್ದು ಸರಿಯಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಇದೇ ಚೊಚ್ಚಲ ಪಂದ್ಯವನ್ನಾಡುತ್ತಿರುವ ಪೃಥ್ವಿ ಶಾ ಮತ್ತು ಅಗರ್ವಾಲ್‌ಗೆ ಅನುಭವದ ಕೊರತೆ ಇದೆ. ಒಂದು ವೇಳೆ ಆರಂಭಿಕ ಆಟಗಾರರು ತಂಡದಲ್ಲಿ ಇಲ್ಲದ ಪಕ್ಷದಲ್ಲಿ ಇವರನ್ನೇ ಆಡಿಸುವುದು ಸರಿಯಾದ ಕ್ರಮ ಎಂದು ಗಂಭೀರ್ ಟೀಂ ಇಂಡಿಯಾಗೆ ಸಲಹೆ ನೀಡಿದ್ದಾರೆ.