ರಾಜಸ್ಥಾನಕ್ಕೆ ಮಳೆ ಬ್ರೇಕ್
Team Udayavani, Apr 12, 2018, 7:00 AM IST
ಜೈಪುರ: ಬಹಳ ಸಮಯದ ಬಳಿಕ ತವರಿನ “ಸವಾಯ್ ಮಾನ್ಸಿಂಗ್ ಸ್ಟೇಡಿಯಂ’ನಲ್ಲಿ ಐಪಿಎಲ್ ಪಂದ್ಯವನ್ನು ಆಡಲಿಳಿದ ರಾಜಸ್ಥಾನ್ ರಾಯಲ್ಸ್ಗೆ ಮಳೆಯಿಂದ ಅಡ್ಡಿಯಾಗಿದೆ. ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧದ ಈ ಪಂದ್ಯ 17.5 ಓವರ್ಗಳ ವೇಳೆ ಸ್ಥಗಿತಗೊಂಡಾಗ ರಹಾನೆ ಬಳಗ 5 ವಿಕೆಟಿಗೆ 153 ರನ್ ಮಾಡಿತ್ತು.
ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಹೀನಾಯ ಸೋಲಿಗೆ ತುತ್ತಾಗಿದ್ದ ರಾಜಸ್ಥಾನ್ ಬುಧವಾರದ ಮುಖಾಮುಖೀಯಲ್ಲಿ ಸುಧಾರಿತ ಆಟವಾಡಿತು. ಆರಂಭಕಾರ ಡಿ’ಆರ್ಸಿ ಶಾರ್ಟ್ ಮತ್ತು ವನ್ಡೌನ್ ಆಟಗಾರ ಬೆನ್ ಸ್ಟೋಕ್ಸ್ ವಿಫಲರಾದರೂ ನಾಯಕ ಅಜಿಂಕ್ಯ ರಹಾನೆ 45 ರನ್ (40 ಎಸೆತ, 5 ಬೌಂಡರಿ) ಮಾಡಿ ತಂಡದ ನೆರವಿಗೆ ನಿಂತರು. ಅವರಿಗೆ ಸಂಜು ಸ್ಯಾಮ್ಸನ್ ಉತ್ತಮ ಬೆಂಬಲವಿತ್ತರು. ಸ್ಯಾಮ್ಸನ್ 22 ಎಸೆತಗಳಿಂದ 37 ರನ್ ಸಿಡಿಸಿದರು (2 ಬೌಂಡರಿ, 2 ಸಿಕ್ಸರ್). ರಹಾನೆ-ಸ್ಯಾಮ್ಸನ್ ಜೋಡಿಯಿಂದ 3ನೇ ವಿಕೆಟಿಗೆ 62 ರನ್ ಹರಿದು ಬಂತು. ಜಾಸ್ ಬಟ್ಲರ್ 18 ಎಸೆತಗಳಿಂದ 29 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿದರೆ, ರಾಹುಲ್ ತ್ರಿಪಾಠಿ ಅಜೇಯ 15 ರನ್ ಮಾಡಿದ್ದರು. ಡೆಲ್ಲಿ ಪರ ಶಾಬಾಜ್ ನದೀಂ 2 ವಿಕೆಟ್ ಉರುಳಿಸಿದರು. ಬೌಲ್ಟ್ ಮತ್ತು ಶಮಿಗೆ ಒಂದೊಂದು ವಿಕೆಟ್ ಲಭಿಸಿತು.
ಸ್ಕೋರ್ಪಟ್ಟಿ
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಸಿ ಮಾರಿಸ್ ಬಿ ನದೀಮ್ 45
ಡಿ’ಆರ್ಸಿ ಶಾರ್ಟ್ ರನೌಟ್ 6
ಬೆನ್ ಸ್ಟೋಕ್ಸ್ ಸಿ ಪಂತ್ ಬಿ ಬೌಲ್ಟ್ 16
ಸಂಜು ಸ್ಯಾಮ್ಸನ್ ಬಿ ನದೀಮ್ 37
ಜಾಸ್ ಬಟ್ಲರ್ ಬಿ ಶಮಿ 29
ರಾಹುಲ್ ತ್ರಿಪಾಠಿ ಔಟಾಗದೆ 15
ಕೆ. ಗೌತಮ್ ಔಟಾಗದೆ 2
ಇತರ 3
ಒಟ್ಟು (17.5 ಓವರ್ಗಳಲ್ಲಿ 5 ವಿಕೆಟಿಗೆ) 153
ವಿಕೆಟ್ ಪತನ: 1-11, 2-28, 3-90, 4-112, 5-150.
ಬೌಲಿಂಗ್:
ಟ್ರೆಂಟ್ ಬೌಲ್ಟ್ 3-0-26-1
ಶಾಬಾಜ್ ನದೀಂ 4-0-34-2
ಕ್ರಿಸ್ ಮಾರಿಸ್ 3-0-34-0
ಮೊಹಮ್ಮದ್ ಶಮಿ 3.5-0-29-1
ರಾಹುಲ್ ಟೆವಾಟಿಯ 4-0-29-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ