ರಮೀಜ್ ರಾಜ ಪಿಸಿಬಿ ಅಧ್ಯಕ್ಷ
Team Udayavani, Aug 26, 2021, 9:43 PM IST
ಲಾಹೋರ್: ಮಾಜಿ ಕ್ರಿಕೆಟಿಗ ರಮೀಜ್ ರಾಜ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತಗೊಂಡಿದೆ.
ಮೊನ್ನೆಯಷ್ಟೇ ಅಧಿಕಾರಾವಧಿ ಮುಗಿಸಿದ ಎಹ್ಸಾನ್ ಮಣಿ ಅವರ ಉತ್ತರಾಧಿಕಾರಿಯಾಗಿ ರಾಜ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ಮಣಿ ಮತ್ತು ರಾಜ ಇಬ್ಬರೂ ಸೋಮವಾರ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. “ನನ್ನ ಯೋಜನೆಗಳನ್ನು ಇಮ್ರಾನ್ಗೆ ವಿವರಿಸಿದ್ದೇನೆ.
ಅವರು ಇದಕ್ಕೆ ಸಮ್ಮತಿಸಿದ್ದು, ಶೀಘ್ರದಲ್ಲೇ ನನಗೆ ಕರೆ ಮಾಡಲಿದ್ದಾರೆ’ ಎಂದು ರಮೀಜ್ ರಾಜ ಹೇಳಿದ್ದರು. 3 ದಿನಗಳ ಬಳಿಕ ರಾಜ ಅವರಿಗೆ ಇಮ್ರಾನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.