ರಮೇಶ್ ಪೊವಾರ್ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್ ಆಗಿ ನೇಮಕ
Team Udayavani, May 13, 2021, 11:38 PM IST
ಹೊಸದಿಲ್ಲಿ : ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಮತ್ತೆ ಭಾರತೀಯ ವನಿತಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಗುರುವಾರ ಪೊವಾರ್ ಆಯ್ಕೆಯನ್ನು ಪ್ರಕಟಿಸಿತು. ಅವರು ಡಬ್ಲ್ಯು.ವಿ. ರಾಮನ್ ಸ್ಥಾನವನ್ನು ತುಂಬಲಿದ್ದಾರೆ.
ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ಲಾಲ್ ನೇತೃತ್ವದ ಸಮಿತಿ 8 ಅಭ್ಯರ್ಥಿಗಳನ್ನು ಸಂದರ್ಶಿಸಿ ರಮೇಶ್ ಪೊವಾರ್ ಅವರನ್ನು ಶಿಫಾರಸು ಮಾಡಿತು. ಸಂದರ್ಶನಕ್ಕೆ ಹಾಜರಾದವರಲ್ಲಿ ಡಬ್ಲ್ಯು.ವಿ. ರಾಮನ್, ಅಜಯ್ ರಾತ್ರಾ, ಹೇಮಲತಾ ಕಲಾ ಹಾಗೂ 4 ಮಂದಿ ಮಾಜಿ ವನಿತಾ ಕ್ರಿಕೆಟಿಗರಿದ್ದರು.
ರಮೇಶ್ ಪೊವಾರ್ 3 ವರ್ಷಗಳ ಹಿಂದೆ ವನಿತಾ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಆದರೆ 2018ರ ವನಿತಾ ಟಿ20 ವಿಶ್ವಕಪ್ ಬಳಿಕ ಅವರನ್ನು ಈ ಸ್ಥಾನದಿಂದ ಉಚ್ಚಾಟಿಸಲಾಗಿತ್ತು.
ಇದನ್ನೂ ಓದಿ :ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ಗೆ ಸೋಲು