ರಣಜಿ: ಕೆ. ಗೌತಮ್‌ ಗಾಯಾಳು

Team Udayavani, Dec 14, 2019, 11:27 PM IST

ಬೆಂಗಳೂರು: ತಮಿಳುನಾಡು ವಿರುದ್ಧದ ಮೊದಲ ರಣಜಿ ಪಂದ್ಯದಲ್ಲಿ 14 ವಿಕೆಟ್‌ ಉಡಾಯಿಸಿದ ಕರ್ನಾಟಕದ ಗೆಲುವಿನ ರೂವಾರಿಯಾಗಿದ್ದ ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ಗಾಯಾಳಾಗಿದ್ದಾರೆ. ಡಿ. 17ರಿಂದ ಹುಬ್ಬಳ್ಳಿಯಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆ ಯುವ ರಣಜಿ ಪಂದ್ಯದಿಂದ ಹೊರಗುಳಿದಿದ್ದಾರೆ.

ಗೌತಮ್‌ ಅವರ ಪಾದದ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿರುವುದರಿಂದ ಆಡುವುದಿಲ್ಲ, ಅವರ ಚೇತರಿಕೆ ಕುರಿತು ಇನ್ನೆರಡು ದಿನದಲ್ಲಿ ಮಾಹಿತಿ ನೀಡುತ್ತೇವೆ ಎಂದು ಕೆಎಸ್‌ಸಿಎ ತಿಳಿಸಿದೆ.

ಉಳಿದಂತೆ ತಂಡದಲ್ಲಿ ಮಹತ್ವದ ಬದಲಾವಣೆ ಸಂಭವಿಸಿಲ್ಲ. ಮನೀಷ್‌ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್‌ ನಾಯರ್‌ ನಾಯಕರಾಗಿ ಮುಂದುವರಿದಿದ್ದಾರೆ.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ರೋಹನ್‌ ಕದಮ್‌, ದೇವದತ್ತ ಪಡಿಕ್ಕಲ್‌, ಡಿ. ನಿಶ್ಚಲ್‌, ಆರ್‌. ಸಮರ್ಥ್, ಅಭಿಷೇಕ್‌ ರೆಡ್ಡಿ, ಪ್ರವೀಣ್‌ ದುಬೆ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಬಿ.ಆರ್‌. ಶರತ್‌, ಶರತ್‌ ಶ್ರೀನಿವಾಸ್‌, ರೋನಿತ್‌ ಮೋರೆ, ಡೇವಿಡ್‌ ಮಥಾಯಿಸ್‌, ವಿ. ಕೌಶಿಕ್‌, ಅಭಿಮನ್ಯು ಮಿಥುನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ