ಕರ್ನಾಟಕಕ್ಕೆ ಫೈನಲ್‌ ಕನಸು


Team Udayavani, Jan 27, 2019, 12:30 AM IST

ra.jpg

ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ಪರಿಣಾಮ, ರಣಜಿ ಸೆಮಿಫೈನಲ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಕರ್ನಾಟಕ ನಿಧಾನಕ್ಕೆ ಅದರಿಂದ ಹೊರಬರುವ ಸುಳಿವು ನೀಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ಗಳಿಸಿದ 275 ರನ್‌ಗಳಿಗೆ ಪ್ರತಿಯಾಗಿ, ಪ್ರವಾಸಿ ಸೌರಾಷ್ಟ್ರ ತನ್ನ 1ನೇ ಇನಿಂಗ್ಸ್‌ ಅನ್ನು ಕೇವಲ 236 ರನ್‌ಗೆ ಮುಗಿಸಿತು. 2ನೇ ಇನಿಂಗ್ಸ್‌ನಲ್ಲಿ ಮತ್ತೆ ಕುಸಿತ ಅನುಭವಿಸಿದ ರಾಜ್ಯ 8 ವಿಕೆಟ್‌ ಕಳೆದುಕೊಂಡು, 237 ರನ್‌ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಪಡೆದ 39 ರನ್‌ ಸೇರಿ ರಾಜ್ಯ ಒಟ್ಟು 276 ರನ್‌ ಮುನ್ನಡೆ ಸಾಧಿಸಿದೆ.

ರಾಜ್ಯದ ಕೈಯಲ್ಲಿ ಇನ್ನೂ ಎರಡು ವಿಕೆಟ್‌ ಇರುವುದರಿಂದ ಈ ಮುನ್ನಡೆಯನ್ನು 300ಕ್ಕೆ ದಾಟಿಸುವ ಅವಕಾಶವಿದೆ. ಇದು ಸಾಧ್ಯವಾದರೆ, ತನ್ನ ಬೌಲಿಂಗ್‌ ಮೂಲಕ ಸೌರಾಷ್ಟ್ರವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರೇ ಫೈನಲ್‌ಗೇರುವ ಅವಕಾಶವನ್ನು ಸಂಪಾದಿಸಲಿದೆ.

ಶುಕ್ರವಾದ ಆಟದಲ್ಲಿ ದಿಢೀರ್‌ ಕುಸಿದು 227 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಸೌರಾಷ್ಟ್ರ, ಶನಿವಾರ ಇನ್ನಷ್ಟು ಕುಸಿತ ಅನುಭವಿಸಿ 9 ರನ್‌ ಗಳಿಸಿ ಒಟ್ಟು 236ಕ್ಕೆ ಆಲೌಟಾಯಿತು. ರೋನಿತ್‌ ಮೋರೆ ಒಟ್ಟು 6 ವಿಕೆಟ್‌ ಕಿತ್ತರು. ಮಿಥುನ್‌ 3 ವಿಕೆಟ್‌ ಸಂಪಾಸಿದರು.

ಮತ್ತೆ ಕುಸಿದ ರಾಜ್ಯ
ಸೌರಾಷ್ಟ್ರವನ್ನು 236 ರನ್‌ಗೆ ಆಲೌಟ್‌ ಮಾಡಿದ ಖುಷಿಯಲ್ಲೇ 2ನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ಇಲ್ಲೂ ಕುಸಿತ ಅನುಭವಿಸಿತು. ಈಗಾಗಲೇ 8 ವಿಕೆಟ್‌ ಕಳೆದುಕೊಂಡಿರುವ ರಾಜ್ಯ ತಂಡದ ಮೊತ್ತ 237. ಆದರೆ ಮೊದಲ ಇನಿಂಗ್ಸ್‌ನಲ್ಲಿ ಸಿಕ್ಕ 39 ರನ್‌ ಮುನ್ನಡೆ ರಾಜ್ಯವನ್ನು ಬಚಾವ್‌ ಮಾಡಿದೆ. ರಾಜ್ಯದ ಈ ಕುಸಿತಕ್ಕೆ  ಪ್ರಮುಖ ಕಾರಣ ಸೌರಾಷ್ಟ್ರ ನಾಯಕ, ವೇಗದ ಬೌಲರ್‌ ಜೈದೇವ್‌ ಉನಾದ್ಕರ್‌ ಹಾಗೂ ಧರ್ಮೇಂದ್ರ ಜಡೇಜ. ಇಬ್ಬರೂ ತಲಾ 3 ವಿಕೆಟ್‌ ಪಡೆದರು.ರಾಜ್ಯಕ್ಕೆ ಮತ್ತೆ ಆಸರೆಯಾಗಿದ್ದು ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌. ಮೊದಲ ಇನಿಂಗ್ಸ್‌ನಲ್ಲಿ  ಶ್ರೇಯಸ್‌ ಗೋಪಾಲ್‌ ಹೋರಾಟಕಾರಿ ಬ್ಯಾಟಿಂಗ್‌ ನಡೆಸಿ 87 ರನ್‌ ಗಳಿಸಿದ್ದರು. ಈ ಇನಿಂಗ್ಸ್‌ನಲ್ಲೂ ನಡೆಸಿ, 61 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದು ರಾಜ್ಯಕ್ಕೆ ಶ್ರೀರಕ್ಷೆಯಾಗುವುದರ ಜೊತೆಗೆ ಮುನ್ನಡೆ ಹೆಚ್ಚಾಗಲು ಕಾರಣವಾಗಿದೆ. ಶ್ರೇಯಸ್‌ ಭಾನುವಾರ ಇನ್ನಷ್ಟು ಜವಾಬ್ದಾರಿಯಿಂದ ಆಡಿದರೆ ರಾಜ್ಯಕ್ಕೆ ಶುಭಸೂಚನೆಯಾಗಲಿದೆ.

ಸಂಕ್ಷೀಪ್ತ ಸ್ಕೋರ್‌: ಕರ್ನಾಟಕ 275 ಮತ್ತು 8 ವಿಕೆಟಿಗೆ 237 (ಶ್ರೇಯಸ್‌ ಗೋಪಾಲ್‌ ಔಟಾಗದೆ 61, ಮಾಯಾಂಕ್‌ ಅಗರ್ವಾಲ್‌ 46, ಮಿಥನ್‌ 35, ಉನಾದ್ಕತ್‌ 35ಕ್ಕೆ3, ಜಡೇಜ 77ಕ್ಕೆ3). ಸೌರಾಷ್ಟ್ರ: 236ಕ್ಕೆ ಆಲೌಟ್‌ (ಸ್ನೇಲ್‌ ಪಟೇಲ್‌ 85, ಜಾಕ್ಸನ್‌ 46, ಪೂಜಾರ 45, ಮೋರೆ 60ಕ್ಕೆ6, ಮಿಥನ್‌ 46ಕ್ಕೆ3

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.