ಬಾಲಿವುಡ್‌ನ‌ತ್ತ ರಶ್ಮಿಕಾ

Team Udayavani, Sep 8, 2019, 5:30 AM IST

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸೌತ್‌ ಸಿನಿ ದುನಿಯಾದಲ್ಲಿ ಸಖತ್‌ ಬ್ಯುಸಿಯಾಗಿರುವ ನಟಿ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಡಿಯರ್‌ ಕಾಮ್ರೆಡ್‌ ಚಿತ್ರಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ, ಸಹಜವಾಗಿಯೇ ಕಾಲಿವುಡ್‌ ಮತ್ತು ಟಾಲಿವುಡ್‌ನ‌ಲ್ಲಿ ಒಂದರ ಹಿಂದೊಂದು ಬಿಗ್‌ ಬಜೆಟ್‌ ಮತ್ತು ಬಿಗ್‌ ಸ್ಟಾರ್ ಚಿತ್ರಗಳ ಆಫ‌ರ್ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಬರುತ್ತಿದೆ. ರಶ್ಮಿಕಾ ಈಗಾಗಲೇ ಮಹೇಶ್‌ ಬಾಬು ಜೊತೆ ಸರಿಲೇರು ನೀಕೇವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲೂ ಅರ್ಜುನ್‌ ಅವರ ಇನ್ನೂ ಹೆಸರಿಡದ 20ನೇ ಚಿತ್ರಕ್ಕೂ ರಶ್ಮಿಕಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ತಮಿಳು ನಟ ಕಾರ್ತಿ ಅಭಿನಯದ “ಸುಲ್ತಾನ್‌’, ತೆಲುಗು ನಟ ನಿತೀನ್‌ ಜೊತೆಯಲ್ಲಿ ಭೀಷ್ಮ ಎಂಬ ಚಿತ್ರದಲ್ಲೂ ರಶ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇದರ ನಡುವೆಯೇ ರಶ್ಮಿಕಾ ಬಾಲಿವುಡ್‌ಗೂ ಅಡಿಯಿಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು, ಬಾಲಿವುಡ್‌ ಮೂಲಗಳ ಪ್ರಕಾರ ತೆಲುಗಿನ ಸೂಪರ್‌ ಹಿಟ್‌ ಚಿತ್ರ ಜೆರ್ಸಿಯ ಹಿಂದಿ ರಿಮೇಕ್‌ನಲ್ಲಿ ನಟ ಶಾಹೀದ್‌ ಕಪೂರ್‌ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಶಾಹೀದ್‌ ಕಪೂರ್‌ ಅವರಿಗೆ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಚಿತ್ರತಂಡ ಕೂಡ ರಶ್ಮಿಕಾ ಅವರನ್ನು ಚಿತ್ರಕ್ಕೆ ಕರೆತರಲು ಉತ್ಸುಕವಾಗಿದ್ದು, ಹಾಗೇನಾದರೂ ಆದರೆ ತೆಲುಗಿನಲ್ಲಿ ಜೆರ್ಸಿ ಚಿತ್ರದಲ್ಲಿ ನಟಿ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ನಿರ್ವಹಿಸಲಿದ್ದಾರೆ.
ಒಟ್ಟಾರೆ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಎಂಟ್ರಿಕೊಡುವ ಬಗ್ಗೆ ಒಂದಷ್ಟು ಸುದ್ದಿಗಳು ಜೋರಾಗಿ ಹರಿದಾಡುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತು ಅಂತಿಮ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ರಶ್ಮಿಕಾ ಮಾತ್ರ ಇದ್ಯಾವುದರ ಬಗ್ಗೆಯೂ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ